ಭಾರಿ ಮಳೆಯಿಂದ ಮನೆ ಕುಸಿದು ಇಬ್ಬರು ಸಾವು

Social Share

ನಾಗ್ಪುರ, ಜು.19 -ಭಾರಿ ಮಳೆಯ ಕಾರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲಾಯಲ್ಲಿ ಇಂದು ಬೆಳಗ್ಗೆ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

ನಾಗ್ಪುರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಅಮರಾವತಿ ಜಿಲ್ಲಾಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದುಹಲವಾರು ಮನೆಗಳು ಶಿತಲಗೊಂಡಿದೆ.

ಕಳೆದ ರಾತ್ರಿ ಏಕಾಏಕಿ ಕಟ್ಟಡ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರನ್ನು ಆವಶೇಷದಿಂದ ರಕ್ಷಿಸಲಾಗಿದ್ದು, ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಅಮರಾವತಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Articles You Might Like

Share This Article