ಮಲೇಷ್ಯಾ ಪ್ರವಾಸಿ ತಾಣದಲ್ಲಿ ಭೂಕುಸಿತ, 51 ಮಂದಿ ನಾಪತ್ತೆ..!

Social Share

ಕೌಲಾಲಂಪುರ್, ಡಿ .16 -ಮಲೇಷ್ಯಾದ ಪ್ರವಾಸಿ ತಾಣ ಬಟಾಂಗ್ ಕಾಲಿ ಮತ್ತು ಸೆಂಟ್ರಲ್ ಸೆಲಂಗೋರ್‍ನಲ್ಲಿ ಭೂಕುಸಿತದಿಂದ ಟೆಂಟ್‍ಗಳ ಮೇಲೆ ಮಣ್ಣು ಕುಸಿದು ಸುಮಾರು 51 ಜನರು ನಾಪತ್ತೆಯಾಗಿದ್ದು ಇಬ್ಬರು ಶವವನ್ನು ಅವಶೇಷದಿಂದ ಹೊರಗೆ ತೆಗೆಯಲಾಗಿದೆ.

ರಾಜಧಾನಿಯ ಕೌಲಾಲಂಪುರ್ ಹೊರ ವುಯದಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ ಸುಮಾರು 79 ಜನರು ಶಿಬಿರದಲ್ಲಿದ್ದರು ಎಂದು ಮಲೇಷ್ಯಾದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಮಗು ಮತ್ತು ಮಹಿಳೆ ಶವ ಪತ್ತೆಯಾಗಿದೆ.ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ 23 ಜನರನ್ನು ರಕ್ಷಿಸಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು 51 ನಾಪತ್ತೆಯಾಗಿದ್ದಾರೆ.

ಸಚಿವಾಲಯ ಹಾಗೂ ಇಲಾಖೆಗಳ ಕ್ಯಾಲೆಂಡರ್‌ ಮುದ್ರಣ ನಿಷೇಧ ತೆರವು

ಮುಂಜಾನೆ 2.24 ರ ಸುಮಾರಿಗೆ ದುರಂತ ನಡೆದಿದೆ ,ಕರೆ ಸ್ವೀಕರಿಸಿದ ಅರ್ಧ ಗಂಟೆಯ ನಂತರ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಬಮದು ರಕ್ಷಣಾ ಕಾರ್ಯ ಪ್ರಾರಂಭಿಸಿದರು. ಗುಡ್ಡ ಕುಸಿದು ಅಂದಾಜು 30 ಮೀಟರ್ ಎತ್ತರದಿಂದ ಮಣ್ಣು ಬಿದ್ದಿದೆ ಮತ್ತು ಸುಮಾರು ಮೂರು ಎಕರೆ ಪ್ರದೇಶವನ್ನು ಆವರಿಸಿದೆ ಎಂದು
ಬೆಳಗಿನ ಜಾವ ಬ್ಯಾಟರಿ ದೀಪಗಳೊಂದಿಗೆ ರಕ್ಷಕಣ ಕಾರ್ಯದ ಚಿತ್ರಗಳನ್ನು ಪೋಸ್ಟ್ ಮಾಡಿದೆ.

ಸೂರ್ಯಕುಮಾರ್ ದಾಖಲೆ ಮುರಿದ ಶ್ರೇಯಸ್‍ಅಯ್ಯರ್

ಘಟನಾ ಸ್ಥಳದ ಬಳಿ ಥೀಮ್ ಪಾರ್ಕ್‍ಗಳು ಮತ್ತು ಮಲೇಷ್ಯಾದ ಏಕೈಕ ಕ್ಯಾಸಿನೂ ಕೂಡ ಇದೆ ದೇಶದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದು ಮ್ರಮುಖ ಕೇಂದ್ರ ಎನ್ನಲಾಗಿದೆ. ಚಿಕ್ಕ ಮಕ್ಕಳೊಂದಿಗೆ ಕೆಲವು ಕುಟುಂಬಗಳು ಹತ್ತಿರದ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ.

Two dead, 50 missing, landslide, Malaysian, capital,

Articles You Might Like

Share This Article