ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

Social Share

ಜಾಜ್‍ಪುರ (ಒಡಿಶಾ), ನ.21-ಗೂಡ್ಸ್ ರೈಲು ಹಳಿತಪ್ಪಿ ಕನಿಷ್ಠ ಇಬ್ಬರು ಸಾವನ್ನಪ್ಪಿ ,ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಘಟನೆ ಇಂದು ಬೆಳಿಗ್ಗೆ ಜಾಜ್‍ಪುರ ಜಿಲ್ಲೆಯ ಕೊರೆ ರೈಲು ನಿಲ್ದಾಣದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಸುಮಾರು 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್‍ಫಾರ್ಮ್‍ನಲ್ಲಿ ಕಾಯುತ್ತಿದ್ದಾಗ ಡೊಂಗೋ ಆಪೋಸಿಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಎಂಟು ವ್ಯಾಗನ್‍ಗಳು ಹಳಿ ತಪ್ಪಿ ಪ್ಲಾಟ್‍ಫಾರ್ಮ್ ಮತ್ತು ವೇಟಿಂಗ್ ಹಾಲ್‍ಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು, ಘಟನೆಯಲ್ಲಿ ನಿಲ್ದಾಣದ ಕಟ್ಟಡಕ್ಕೆ ಹಾನಿಯಾಗಿದೆ.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ತನಿಖೆಗೆ ಆದೇಶಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆದ್ದಾರೆ. ಅಪಘಾತದಿಂದಾಗಿ ಎರಡೂ ಮಾರ್ಗಗಳಲ್ಲಿ ರೈಲು ಓಡಾಟ ನಿರ್ಬಂಧಿಸಿರುವುದರಿಂದ ಈ ಭಾಗದಲ್ಲಿ ರೈಲು ಸೇªಗೆ ಭಾಗಶಃ ಪರಿಣಾಮ ಬೀರಿವೆ ಸ್ಥಳಕ್ಕೆ ಪರಿಹಾರ ರೈಲು ಮತ್ತು ವೈದ್ಯಕೀಯ ತಂಡವನ್ನು ಕಳುಹಿಸಲಾಗಿದೆ.

ಕಳೆಗಟ್ಟಿದ ಕಡಲೆಕಾಯಿ ಪರಿಷೆ, ಹರಿದುಬಂದ ಜನಸಾಗರ

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಟ್ವಿಟರ್‍ನಲ್ಲಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

Two, die, goods, train, derails, Odisha, Jaipur,

Articles You Might Like

Share This Article