ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ

Social Share
ಮುಂಬೈ, ಫೆ.12 -ಅಂತರ್ಜಾಲ  ಸೇವೆ ಸರಿಪಡಿಸುವ ತಂತ್ರಜ್ಞರಂತೆ ನಟಿಸಿ ಫ್ಲ್ಯಾಟ್‍ಗೆ ಬಂದ ಇಬ್ಬರು ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಚಿನ್ನದ ಸರ ದೋಚಿದ ಘಟನೆ ಮುಂಬೈನ ಪರೇಲ್‍ನಲ್ಲಿರುವ ವಸತಿಸಮುಚ್ಚಯದಲ್ಲಿ ನಡೆದಿದೆ.

ಮೊದಲು ವೈಫೈ ಸಂಪರ್ಕವನ್ನು ಸರಿಪಡಿಸಲು ನಾವು ಬಂದಿದ್ದೇವೆ ಎಂದು ವಸತಿಸಮುಚ್ಚಯಕ್ಕೆ ಇಬ್ಬರು ಪ್ರವೇಶಿಸಿದ್ದಾರೆ ನಂತರ ಒಬ್ಬಂಟಿಯಾಗಿದ್ದ ಮಹಿಳೆ ಗುರುತಿಸಿ ಮನೆ ಬಳಿ ಬಂದಿದ್ದಾರೆ ಮನೆಯೊಳಗೆ ಬಂದು ಪರೀಕ್ಷಿಸಬೇಕೆ ಎಂದು ಕೇಳಿದ್ದಾರೆ ಆಕೆ ಬಿಡದಿದ್ದಾಗ ತಳ್ಳಿ ನುಗ್ಗಿದ್ದಾರೆ.

ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ

ಒಬ್ಬ ಆಕೆಯ ಬಾಯಿಯನ್ನು ಬಿಗಿದು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ ನಂತರ ಬೀರು ಕೀಗಳನ್ನು ಕೇಳಿದ್ದಾರೆ ಆದರೆ ಅಕೆ ನಿರಾಕರಿಸಿದಾಗ ಚಾಕುವಿನಿಂದ ಅವಳ ಎದೆಗೆ ಇರಿದಿದ್ದಾರೆ. ಗಾಯಗೊಂಡ ಮಹಿಳೆ ಕುಸಿದುಬಿದ್ದ ನಂತರ ದುಷ್ಕರ್ಮಿಗಳು ಪರಾರಿಯಾಗಿದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆಕೆ ನೆರೆಹೊರೆಯವರಿಗೆ ಕರೆ ಮಾಡಿ ಘಟನೆ ಬೆಳಕಿಗೆ ಬಂದಿದೆ ಮನೆಗೆ ಬಂದ ಪತಿ ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

Two, enter, Mumbai, flat, posing, technicians, rob, woman, gold chain,

Articles You Might Like

Share This Article