ಭೋಪಾಲ್,ಜ.28- ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಆಗಸದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಬ್ಬ ಪೈಲಟ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ತರಬೇತಿ ಅಭ್ಯಾಸಕ್ಕೆಂದು ಗ್ವಾಲಿಯರ್‍ನ ಏರ್‍ಪೋರ್ಸ್ ಬೇಸ್‍ನಿಂದ ಟೇಕಾಫ್ ಆದ ಸುಖೋಯ್ -30 ಮತ್ತು ಮಿರಾಜ್ 2000 ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
7 ಇಸ್ರೇಲಿಗರನ್ನು ಗುಂಡಿಕ್ಕಿ ಕೊಂದ ಪ್ಯಾಲೆಸ್ತಾನಿ ಬಂದೂಕುಧಾರಿ
ಮೊರೆನಾ ಎಂಬ ಪ್ರದೇಶದಲ್ಲಿ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಉರುಳಿಬಿದ್ದಿರುವ ಅವಶೇಷಗಳನ್ನು ಸ್ಥಳೀಯರು ಚಿತ್ರಿಕರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಎರಡು ಜೆಟ್‍ಗಳು ಗಾಳಿಯಲ್ಲಿ ಪರಸ್ಪರ ಡಿಕ್ಕಿ ಹೊಡೆದಿರುವ ಕುರಿತು ಏರ್‍ಫೆಪೋರ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅಪಘಾತ ನಡೆದ ಸಂದರ್ಭದಲ್ಲಿ ಸುಖೋಯ್-30 ಯುದ್ಧ ವಿಮಾನದಲ್ಲಿ ಇಬ್ಬರು ಪೈಲಟ್‍ಗಳು ಹಾಗೂ ಮಿರಾಜ್ 2000 ವಿಮಾನದಲ್ಲಿ ಒಬ್ಬ ಪೈಲಟ್ ಕರ್ತವ್ಯ ನಿರ್ವಹಿಸುತ್ತಿದ್ದು, ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲವ್ ಫೇಲ್ಯೂರ್, ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ ವೈದ್ಯ
ಅಪಘಾತ ನಡೆದಿರುವ ಸ್ಥಳಕ್ಕೆ ಹೆಲಿಕಾಫ್ಟರ್‍ನಲ್ಲಿ ತೆರಳಿರುವ ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.
Two, Fighter Jets, Sukhoi-30, Mirage 2000, Crash, Madhya Pradesh,