ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

Social Share

ಬೆಂಗಳೂರು, ಆ. 9- ವಿದೇಶದಿಂದ ಅಕ್ರಮವಾಗಿ ವಿಮಾನದಲ್ಲಿ ಚಿನ್ನ ಸಾಗಣೆ ಮಾಡಿಕೊಂಡು ಬಂದ ಇಬ್ಬರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, 90 ಲಕ್ಷ ಮೌಲ್ಯದ 1.7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಥಾಯ್ಲೆಂಡ್ ದೇಶದ ಫುಕೆಟ್ ನಿಂದ ವಿಮಾನದಲ್ಲಿ ಬೆಂಗಳೂರು ನಿಲ್ದಾಣಕ್ಕೆ ಬಂದಿಳಿದ 28 ವರ್ಷದ ಪ್ರಯಾಣಿಕನನ್ನು
ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತ ಧರಿಸಿದ ಬಟ್ಟೆಯೊಳಗೆ ಚಿನ್ನದ 18 ಬಿಸ್ಕತ್‍ಗಳು ಪತ್ತೆಯಾಗಿದೆ.

ಬಟ್ಟೆಯೊಳಗೆ ಮರೆಮಾಚಿ ಚಿನ್ನವನ್ನಿಟ್ಟು ನಂತರ ಹೊಲಿಗೆ ಹಾಕಿ ಅಕ್ರಮ ಚಿನ್ನ ಸಾಗಣೆಗೆ ಮುಂದಾಗಿದ್ದ. ಬಂಧಿತ ಆರೋಪಿಯಿಂದ 63 ಲಕ್ಷ ಮೌಲ್ಯದ 1.199 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಬಹ್ರೈನ ದೇಶದ ಮನಮದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಈತನ ಅನುಮಾನಾಸ್ಪದ ನಡಿಗೆಯಿಂದ ಸಂಶಯಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿದಾಗ ವಿಲಕ್ಷಣವಾದ ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ 519 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article