ನಕ್ಸಲರ ಬಾಂಬ್ ಸ್ಪೋಟದಲ್ಲಿ ಮಹಿಳೆ ಸೇರಿ ಇಬ್ಬರು ಬಲಿ

Naxals

ರಾಯ್‍ಪುರ್, ಸೆ.17-ನಕ್ಸಲರ ಹಿಂಸೆಯಿಂದ ನಲುಗುತ್ತಿರುವ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ನಡೆಸಿದ ವಿಧ್ವಂಸಕ ಕೃತ್ಯದಲ್ಲಿ ಮಹಿಳೆ ಯೊಬ್ಬರೂ ಸೇರಿದಂತೆ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.  ಸುಕ್ಮಾ ಜಿಲ್ಲೆಯ ಮೆಟಗುಡೆಂ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ನಿನ್ನೆ ಬೆಳಕಿಗೆ ಬಂದಿದೆ. ಛತ್ತೀಸ್‍ಗಢ ರಾಜಧಾನಿ ರಾಯ್‍ಪುರ್‍ನಿಂದ 500 ಕಿ.ಮೀ.ದೂರದ ಈ ಹಳ್ಳಯ ಹೊರವಲಯದಲ್ಲಿ ನಕ್ಸಲರು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಹುದುಗಿಸಿಟ್ಟಿದ್ದರು.  ನೆಲದೊಳಗಿದ್ದ ಈ ಸ್ಫೋಟಕವನ್ನು ಶುಕ್ರವಾರ ರಾತ್ರಿ ತುಳಿದವರಲ್ಲಿ ಇಬ್ಬರು ಮೃತಪಟ್ಟರು. ಇವರಲ್ಲಿ ಮಹಿಳೆಯೂ ಸೇರಿದ್ದಾರೆ. ಈ ದುಷ್ಕೃತ್ಯದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಮಾವೋವಾದಿಗಳ ದುಷ್ಕೃತ್ಯ ಬೆಳಕಿಗೆ ಬಂದಿತು.

Sri Raghav

Admin