ಬೆಂಗಳೂರು,ಫೆ.23- ಮನೆಕಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 7.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಾನುಗಳು ಮತ್ತು ದುಬಾರಿ ಬೆಲೆಯ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶ ಮೂಲದ ವಿನೋದ್ ಕುಮಾರ್ (27) ಮತ್ತು ನಗರದ ಶರತ್‍ಕುಮಾರ್ (30) ಬಂಧಿತರು.
ವಿದ್ಯಾರಣ್ಯಪುರದ ಬೆಸ್ಟ್‍ಕೌಂಟ್ಟಿ-2 ನಿವಾಸಿ ಸುಮತಿ ಕುಟುಂಬದವರು ಕಳೆದ ಆಗಸ್ಟ್ 26ರಂದು ತಮಿಳುನಾಡಿನ ಚೆನ್ನೈಗೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಇವರ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ ಮನೆಯನ್ನೆಲ್ಲಾ ಜಾಲಾಡಿ ಸುಮಾರು 76.5 ಗಾಂ ತೂಕದ ಚಿನ್ನಾಭರಣಗಳು, 2 ಕೆ.ಜಿ 96 ಗ್ರಾಂ ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ
ಈ ಬಗ್ಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿ ಟಿವಿಗಳನ್ನು ಪರಿಶೀಲಿಸಿ ಅದರಲ್ಲಿರುವ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಇಬ್ಬರನ್ನು ಬಂಧಿಸಿದೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿ 6.23 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಾನುಗಳು ಮತ್ತು 1.20 ಲಕ್ಷ ರೂ. ಬೆಲೆ ಬಾಳುವ ಪಲ್ಸರ್ ಎನ್‍ಎಸ್ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆಂಧ್ರಪ್ರದೇಶದ ರಾಯಚೋಟಿ, ಮದನಪಲ್ಲಿ, ಮೈದಕೂರು ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ ಮತ್ತು ಮನೆಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.
AIDMK ಮುಖ್ಯಸ್ಥರಾಗಿ ಪಳನಿಸ್ವಾಮಿ ಮುಂದುವರಿಕೆ
ಈಶಾನ್ಯವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಅನುಪ್‍ಶೆಟ್ಟಿ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಎಸಿಪಿ ಮಂಜುನಾಥ್ ಅವರ ಸಲಹೆಯಂತೆ ಇನ್ಸ್‍ಪೆಕ್ಟರ್ ಸುಂದರ್ ಅವರ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.