ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಪೋಟ, ಇಬ್ಬರ ಸಾವು, ಹಲವರಿಗೆ ಗಾಯ

Social Share

ಕಂಟೈ,ಡಿ.3- ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬಹಿರಂಗ ರ‍್ಯಾಲಿ ನಡೆಯುವ ಸಮೀಪದಲ್ಲೇ ನಿನ್ನೆ ತಡ ರಾತ್ರಿ ಬಾಂಬ್ ಸ್ಪೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಪುರ್ಬಾಮೆದಿನಿಪುರ್ ಜಿಲ್ಲೆಯ ಭೂಪತಿನಗರದ ಮನೆಯೊಂದರಲ್ಲಿ ನಿನ್ನೆ ರಾತ್ರಿ 1.15ರ ಸುಮಾರಿಗೆ ಸ್ಪೋಟ ಸಂಭವಿಸಿದೆ. ಶನಿವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ಹಲವು ಮಂದಿ ಗಾಯಗೊಂಡಿದ್ದಾರೆ. ಸ್ಪೋಟಕ್ಕೆ ನಿಖರವಾದ ಕಾರಣ ಈವರೆಗೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ.

ಶಕ್ತಿಶಾಲಿ ಸ್ಪೋಟದಿಂದ ಮಣ್ಣಿನ ಮನೆಯ ಧ್ವಂಸವಾಗಿದ್ದು, ಹುಲ್ಲಿನ ಮೇಲ್ಚಾವಣಿ ಹಾರಿಹೋಗಿದೆ ಎಂದು ಹಿರಿಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ.

ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ ಬೆಂಗಳೂರು

ಟಿಎಂಸಿಯ ಪ್ರಭಾವಿ ನಾಯಕ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಅಭಿಷೇಕ್ ಬ್ಯಾನರ್ಜಿ ಇಂದು ಭೂಪತಿನಗರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಈ ಸ್ಥಳದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿ ಸ್ಪೋಟ ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನೀತಿ ಪರಿಷ್ಕರಣೆ

ಸ್ಪೋಟದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ದಿಲೀಪ್ ಘೋಷ್, ಘಟನೆಗೆ ಟಿಎಂಸಿ ಪಕ್ಷವೇ ಹೊಣೆಯಾಗಿದೆ. ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿ ಬಾಂಬ್ ತಯಾರಿಕೆ ಉದ್ಯಮ ಪ್ರವರ್ದಮಾನಕ್ಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಪಿಐ (ಎಂ)ನ ಮುಖಂಡ ಸುಜನ್ ಚಕ್ರವರ್ತಿ, ಇಂತಹ ಘಟನೆಗಳ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸದೆ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕಾದ ಮಾಜಿ ಗುಪ್ತಚರ ಅಧಿಕಾರಿಗೆ ರಷ್ಯಾ ಪೌರತ್ವ

ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಆಧಾರ ರಹಿತವಾಗಿ ಆಡಳಿತಾ ರೂಢ ಪಕ್ಷದ ಮೇಲೆ ದೋಷ ಹೊರಿಸುವುದು ಪ್ರತಿಪಕ್ಷಗಳಿಗೆ ಸುಲಭ ಎಂದಿದ್ದಾರೆ.

two, Killed, Bomb, Blast, Trinamool Leader, House, Bengal,

Articles You Might Like

Share This Article