ಮನಬಂದತೆ ನುಗ್ಗಿದ ಎಸ್‍ಯುವಿ ; ಇಬ್ಬರು ಸಾವು, 8 ಮಂದಿಗೆ ಗಾಯ

Social Share

ನವದೆಹಲಿ,ಮಾ.9- ಕಾರು ಮತ್ತು ರಸ್ತೆ ಬದಿಯ ಬಂಡಿಗಳಿಗೆ ವೇಗವಾಗಿ ಬಂದ ಎಸ್‍ಯುವಿ ಡಿಕ್ಕಿ ಹೊಡೆದ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈರುತ್ಯ ದಿಲ್ಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

ವಸಂತ್ ವಿಹಾರ್ ಪ್ರದೇಶದಲ್ಲಿ ವೇಗವಾಗಿ ಬಂದ ಎಸ್‍ಯುವಿ ಎರಡು ಕಾರುಗಳು ಮತ್ತು ಮೂರು ಬಂಡಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್‌ಗೆ ಸಾಕ್ಷಿಯಾದ ಮೋದಿ-ಅಲ್ಬನಿಸ್

ಅಪಘಾತದಲ್ಲಿ ಮಕ್ಕಳು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಏಮ್ಸï ಟ್ರಾಮಾ ಸೆಂಟರ್‍ಗೆ ಕರೆದೊಯ್ಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಮನೋಜ್ ಸಿ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಮುನ್ನ ಮತ್ತು ಸಮೀರ್ ಎಂದು ಗುರುತಿಸಲಾಗಿದೆ.

ಪಾರಿವಾಳದ ಮೂಲಕ ಬೇಹುಗಾರಿಕೆ..!

ಗಾಯಗೊಂಡಿರುವವರು ಹಾಗೂ ಮೃತರು ಶಿವಕ್ಯಾಂಪ್, ವಸಂತ ವಿಹಾರ, ಏಕತಾ ವಿಹಾರ್ ಹಾಗೂ ಆರ್‍ಕೆ ಪುರಂ ನಿವಾಸಿಗಳು ಎಂದು ಪತ್ತೆ ಹಚ್ಚಲಾಗಿದೆ. ಘಟನೆಯ ನಂತರ ಎಸ್‍ಯುವಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದ ಆದರೂ ಆತನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Two, Killed, Delhi, Speeding, SUV, Hits, Cars,

Articles You Might Like

Share This Article