ಶಿಮ್ಲಾ,ಫೆ.6- ಹಿಮಾಚಲ ಪ್ರದೇಶದಲ್ಲಿ ಹಿಮ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಶಿಂಕುಲಾ-ದರ್ಚಾ ರಸ್ತೆಯಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಈ ದುರ್ಘಟನೆ ನಡೆದಿದೆ.
ಹಿಮ ಕುಸಿತಕ್ಕೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಂಜೆ ಚಿಕಾ ಗ್ರಾಮಕ್ಕೆ ಹಿಮಕುಸಿತ ಸಂಭವಿಸಿದೆ ಹಿಮಪಾತದಲ್ಲಿ ಸ್ನೋ ಕಟರ್‍ಗಳ ಜೊತೆಗೆ ಮೂವರು ಕಾರ್ಮಿಕರು ಹಿಮದ ಅಡಿಯಲ್ಲಿ ಹೂತು ಹೋಗಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರನ್ನೊಳಗೊಂಡ ತಂಡವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು
ನೇಪಾಳದ ರಾಮ್ ಬುಧ ಮತ್ತು ಚಂಬಾದ ರಾಕೇಶ್ ಅವರ ಮೃತದೇಹಗಳು ಪತ್ತೆಯಾಗಿವೆ. ಮೂರನೇ ಕಾರ್ಮಿಕ, ನೇಪಾಳದ ನಿವಾಸಿ ಪಾಸಾಂಗ್ ಚೆರಿಂಗ್ ಲಾಮಾ (27) ಕಾಣೆಯಾಗಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ರಾತ್ರಿ ತಾಪಮಾನ ಮತ್ತು ಗೋಚರತೆ ಕಡಿಮೆಯಾದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಇದೀಗ ಮತ್ತೆ ಕಾರ್ಯಚರಣೆ ಅರಂಭಿಸಲಾಗಿದೆ.
Two killed, one missing, following, avalanche, Himachal Pradesh,