ನವದೆಹಲಿ,ಫೆ.5- ಶ್ರೀನಗರದ ಝಕುರಾ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್-ಎ-ತಯ್ಯಬಾ(ಎಲ್‍ಇಟಿ) ಮತ್ತು ದಿ ರೆಸೆಸ್ಟೆನ್ಸ್ ಫ್ರಂಟ್(ಟಿಆರ್‍ಇ) ಭಯೋತ್ಪಾದಕ ಸಂಘಟನೆಗಳಿಗೆ ಏರಿದ ಕನಿಷ್ಠ ಪಕ್ಷ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇತ್ತೀಚೆಗೆ ಅನಂತನಾಗ್‍ನ ಹಸನ್‍ಪುರದಲ್ಲಿ ಹೆಡ್‍ಕಾನ್‍ಸ್ಟೆಬ¯ ಅಲಿ ಮೊಹಮ್ಮದ್ ಅವರನ್ನು ಹತ್ಯೆಯಲ್ಲಿ ಭಾಗಿಯಾಗಿದ್ದ ಇಕ್ಬಾಲ್ ಹಾಜಂ ಕೂಡ ಇಂದು ಎನ್‍ಕೌಂಟರ್‍ಗೆ ಬಲಿಯಾದ ಉಗ್ರರಲ್ಲಿ ಒಬ್ಬನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಉಗ್ರರಿಂದ ಎರಡು ಪಿಸ್ತೂಲ್‍ಗಳು ಸೇರಿದಂತೆ ಹಲವಾರು ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ನುಡಿದಿದ್ದಾರೆ.
