ನಿಂದಿಸಿದ ವಿಡಿಯೋ ವೈರಲ್ : ಇಬ್ಬರು ಪೊಲೀಸರ ಅಮಾನತು

Social Share

ಜಬುವಾ, ಜ.2 – ಮಧ್ಯಪ್ರದೇಶದ ಝಬುವಾ ಜಿಲ್ಲಾಯಲ್ಲಿ ಜನರ ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡಿ ನಿಂದಿಸಿದ ಆರೋಪದ ಮೇಲೆ ಇಬ್ಬರು ಪೊಲಿಸರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ರಾಯ್ಪುರಿಯಾ ಪಟ್ಟಣದ ಚೌಕದಲ್ಲಿ
ಗುಂಪು ಸೇರಿದ್ದ ಜನರನ್ನು ಪೊಲಿಸರು ಚದುರಿಸಲು ಮುಂದಾದಾಗ ಗಲಾಟೆ ನಡೆದಿದೆ.
ಈ ವೇಳೆ ಲಾಠಿ ಚಾರ್ಜ್ ಮಾಡಲಾಗಿತ್ತು ಇದರಿಂದ ರೊಚಿಗೆದ್ದ ಜನರು ಪೊಲೀಸ್ ಠಾಣೆಯ ಮೇಲು ದಾಳಿ ನಡೆಸಿದ್ದರು . ಕೆಲವರು ಪೊಲೀಸರು ಲಾಠಿ ಬೀಸುವುದು , ಜನರನ್ನು ನಿಂದಿಸಿವುದನ್ನು ಮೊಬೈಲ್ ನಲ್ಲ ವೀಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲ (ವೈರಲ್ )ಬಿಡುಗಡೆ ಮಾಡಿದ್ದರು ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಉಪವಿಭಾಗಾಧಿಕಾರಿ ಸೋನು ಇಬ್ಬರು ಸಹಾಯಕ ಸಬ್ ಇನ್ಸ್ಪೆಕ್ಟರ್ ರನ್ಮು ಅಮಾನತ್ತು ಮಡಿದ್ದಾರೆ.

Articles You Might Like

Share This Article