ಮಕ್ಕಳ ಮೇಲೆ ಕೊರೊನಾ ಕೆಂಗಣ್ಣು, ಸೋಂಕಿಗೆ 2 ತಿಂಗಳ ಹಸುಗೂಸು ಬಲಿ

Social Share

ಬೆಂಗಳೂರು,ಫೆ.3-ಇದುವರೆಗೂ ವಯಸ್ಕರ ಮೇಲೆ ದಾಳಿ ನಡೆಸುತ್ತಿದ್ದ ಕೊರೊನಾ ಮಹಾಮಾರಿ ಕೆಂಗಣ್ಣು ಇದೀಗ ಮಕ್ಕಳ ಮೇಲೂ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಬಿಟ್ಟುಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿಗೆ ಇದೇ ಮೊದಲ ಬಾರಿಗೆ ಎರಡು ತಿಂಗಳ ಹಸುಗೂಸು ಬಲಿಯಾಗಿದೆ.
ಬೆಳಗಾವಿಯಲ್ಲಿ ಜ್ವರ ಮತ್ತು ಕೆಮ್ಮಿನಿಂದ ನರಳುತ್ತಿದ್ದ ಎರಡು ತಿಂಗಳ ಗಂಡು ಕೂಸು ಕೊರೊನಾ ಮಹಾಮಾರಿಯಿಂದಾಗಿ ಜೀವ ಕಳೆದುಕೊಂಡಿದೆ. ಜ್ವರ ವiತ್ತು ಕೆಮ್ಮಿನಿಂದ ಜ.17 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎರಡು ತಿಂಗಳ ಹಸುಗೂಸಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ವೈದ್ಯರು ಮಗುವಿನ ರಕ್ಷಣೆಗೆ ಹರಸಾಹಸ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸು ನೀಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿಯಿಂದ ತಿಳಿದುಬಂದಿದೆ. ಇದರ ಜತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲೂ ಭಾರಿ ಏರಿಕೆ ಕಂಡು ಬರುತ್ತಿರುವುದು ಭೀತಿಗೆ ಕಾರಣವಾಗಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ 81 ಮಂದಿ ಪ್ರಾಣ ಕಳೆದಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್‍ನಲ್ಲಿ ಬಹಿರಂಗಗೊಂಡಿದೆ.

Articles You Might Like

Share This Article