ಇಬ್ಬರು ಪ್ಯಾಲೇಸ್ತಿನಿಯರನ್ನು ಗುಂಡಿಟ್ಟು ಕೊಂದ ಇಸ್ರೇಲ್

Social Share

ರಾಮಲ್ಲಾಹ್,ಜ.19- ಇಸ್ರೇಲಿ-ಪ್ಯಾಲೇಸ್ತಿನ್ ಹಿಂಸಾಚಾರ ಉಲ್ಬಣಗೊಳ್ಳುತ್ತಲೇ ಇದ್ದು, ಇಂದು ಮುಂಜಾನೆ ಪಶ್ಚಿಮ ದಂಡೆಯಲ್ಲಿ ಮಿಲಿಟರಿ ದಾಳಿಯ ವೇಳೆ ಇಸ್ರೇಲಿ ಪಡೆಗಳು ಇಬ್ಬರು ಪ್ಯಾಲೆಸ್ಟೀನಿಯಾದವರನ್ನು ಗುಂಡಿಕ್ಕಿ ಕೊಂದಿವೆ.

ಪ್ಯಾಲೇಸ್ತಿನಿಯನ್ ಅಧಿಕೃತ ಸುದ್ದಿ ಸಂಸ್ಥೆ ವಫಾ ಮೃತರನ್ನು ಜವಾದ್ ಬವತ್ಕಾ (58) ಮತ್ತು ಅದಮ್ ಜಬರಿನ್ ಎಂದು ಗುರುತಿಸಿದೆ. ಉತ್ತರ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ಪ್ಯಾಲೇಸ್ಟಿನಿಯನ್ ಮಾಧ್ಯಮಗಳು ಬವತ್ಕಾ ಒಬ್ಬ ಶಿಕ್ಷಕ ಎಂದು ತಿಳಿಸಿದೆ. ರಾಜಕೀಯ ಪಕ್ಷವಾಗಿ ಜಾತ್ಯತೀತ ಹಾಗೂ ಶಸ್ತ್ರಾಸ್ತ್ರ ಹೋರಾಟ ನಡೆಸುವ ಫತ್ಹದೊಂದಿಗೆ ಸಂಯೋಜಿತ ಹುತಾತ್ಮರ ಬ್ರಿಗೇಡ್ ಆಲ್-ಅಕ್ವಾಸ ಜಬರಿನ್‍ರನ್ನು ಹೋರಾಟಗಾರ ಎಂದು ಬಣ್ಣಿಸಿದೆ. ಇಸ್ರೇಲಿ ಸೇನೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜೆನಿನ್‍ನಲ್ಲಿ ತೀವ್ರವಾದಿ ಗುಂಪಿನ ಇಸ್ಲಾಮಿಕ್ ಜಿಹಾದ್‍ನ ಸ್ಥಳೀಯ ನಾಯಕನ್ನು ಇಸ್ರೇಲ್ ಪಡೆಗಳು ಬಂಧಿಸಿವೆ ಎಂದು ಪ್ಯಾಲೇಸ್ಟಿನಿಯನ್ ಮಾಧ್ಯಮಗಳು ವರದಿ ಮಾಡಿವೆ.

ಮೈಕೊರೆಯುವ ಚಳಿಯಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಇಸ್ರೇಲಿಗಳ ವಿರುದ್ಧ ಪ್ಯಾಲೇಸ್ಟಿನಿಯನಿಯರು ದಾಳಿ ನಡೆಸಿ 19 ಜನರನ್ನು ಕೊಂದ ಬಳಿಕ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ಇದರಿಂದ ಪಶ್ಚಿಮ ದಂಡೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಕಳೆದ ವರ್ಷದ ನಡೆದ ದಾಳಿಯಲ್ಲಿ 10 ಮಂದಿ ಇಸ್ರೇಲಿಗಳ ಹತ್ಯೆಯಾಗಿತ್ತು. ಭವಿಷ್ಯದ ದಾಳಿಯನ್ನು ತಡೆಯಲು ಮತ್ತು ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಕಾರ್ಯಚರಣೆ ತೀವ್ರವಾಗಿದೆ ಎಂದು ಇಸ್ರೇಲ್ ಹೇಳಿದೆ.

ಡಿವೈಡರ್‌ಗೆ ಕಾರು ಡಿಕ್ಕಿ, ಕಾನ್ಸ್‌ಸ್ಟೇಬಲ್‌ಗ‌ಳಿಗೆ ಗಾಯ

ಈ ವರ್ಷದ ಆರಂಭದಿಂದ ಈವರೆಗೂ 17 ಮಂದಿ ಪ್ಯಾಲೇಸ್ತಿನಿಯರ ಹತ್ಯೆಯಾಗಿದೆ, ಕಳೆದ ವರ್ಷ 150 ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‍ನ ಬಲಪಂಥೀಯ ಗುಂಪು ಪ್ರತಿಪಾದಿಸುವ ಪ್ರಕಾರ ಮೃತಪಟ್ಟವರಲ್ಲಿ ಬಹುತೇಕರು ಉಗ್ರಗಾಮಿಗಳು ಎಂದು ಆರೋಪಿಸಲಾಗಿದೆ.

Two, Palestinians, killed, Israeli, raid, Jenin,

Articles You Might Like

Share This Article