ಆಸ್ಟ್ರೇಲಿಯಾದಲ್ಲಿ ಗುಂಡಿನ ಚಕಮಕಿ, 6 ಜನರ ಸಾವು

Social Share

ಬ್ರಿಸ್ಬೇನ್, (ಆಸ್ಟ್ರೇಲಿಯಾ)ಡಿ .13- ನಾಪತ್ತೆಯಾಗಿದ್ದ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲು ಆಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ಹೊಂಚು ಹಾಕಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಲಾಗಿದ್ದು ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.

ಕ್ವೀನ್ಸ್‍ಲ್ಯಾಂಡ್‍ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಮೇಲೆ ನುಗ್ಗಿ ಬಂದ ತಂಡ ಹಲ್ಲೆ ಕೂಡ ನಡೆಸಿದ್ದು ಪ್ರತಿಯಾಗಿ ನಮ್ಮವರು ಗುಂಡು ಹಾರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಮೊದಲಿಗೆ ಇಬ್ಬರು ಶೂಟರ್‍ಗಳು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ್ದ ನಾಲ್ವರಲ್ಲಿ ಮೂವರು ಗುಂಡೇಟಿನಿಂದ ಸಾವನ್ನಪ್ಪಿದರೆ ಬಬ್ಬರು ಗಾಯಗೊಂಡು ಗುಂಪಿನಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಪೊಲೀಸ್ ಕಮಿಷನರ್ ಕಟರೀನಾ ಕ್ಯಾರೊಲ್ ತಿಳಿಸಿದ್ದಾರೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಗಿಲಲ್ಲಿ ಆರ್‌ಆರ್‌ಆರ್‌

ವಿಶೇಷ ಪೊಲೀಸ್ ತಂಡವು ವಾಯು ಪಡೆಯೊಂದಿಗೆ ಘಟನಾ ಸ್ಥಳಕ್ಕೆ ರಾತ್ರಿ 10.30ರ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಇಬ್ಬರು ಪುರುಷರು ಮತ್ತು ಮಹಿಳೆ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ.

ಠೇವಣಿ ಸಂಗ್ರಹಿಸಿ ವಂಚಿಸುವ ಕಂಪನಿಗಳ ವಿರುದ್ಧ ಕಠಿಣ ಕ್ರಮ: ಅಶೋಕ್

ಘಟನೆಯ ಬಗ್ಗೆ ವಿವರಿಸುವಾಗ ಕಮಿಷನರ್ ಕಟರೀನಾ ಕ್ಯಾರೊಲ್ ಅವರು ಕಣ್ಣೀರು ಹಾಕಿ ಪರಿಸ್ಥಿತಿ ವಿನಾಶಕಾರಿಯಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಘಟನೆಯಲ್ಲಿ ನಾವು ಅನುಭವಿಸಿದ ಅತಿದೊಡ್ಡ ಜೀವಹಾನಿಯಾಗಿದೆ ಎಂದು ಹೇಳಿದರು.
ವ್ಯಾಪಕ ಹಿಂಸಾಚಾರ ನಡೆದಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದರು.

Two police, officers, 6 killed, Australia,

Articles You Might Like

Share This Article