ದಿಯೋಘರ್ (ಜಾರ್ಖಂಡ್),ಫೆ.12- ಜಾರ್ಖಂಡ್‍ನ ದಿಯೋಘರ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ರಾಂಚಿಯಿಂದ 250 ಕಿಮೀ ದೂರದಲ್ಲಿರುವ ದಿಯೋಘರ್ ಪಟ್ಟಣದ ಶ್ಯಾಮ್‍ಗಂಜ್ ರಸ್ತೆಯಲ್ಲಿ ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಈ ಪಟ್ಟಣದಲ್ಲಿನ ಮೀನಿನ ವ್ಯಾಪಾರಿಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ
ಇದರಿಂದ ಆತಂಕಗೊಂಡ ಮನೆಯವರು ಪೊಲೀಸ್ ಭದ್ರತೆ ಕೋರಿದ್ದರು. ರಕ್ಷಣೆಗಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಸುಭಾಷ್ ಚಂದ್ರ ಜಾಟ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಆಗಮಿಸಿದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ದಾಳಿ ನಡೆಸಿದ್ದಾರೆ, ಪೊಲೀಸರು ಪ್ರತಿ ಗುಂಡು ಹಾರಿಸಿದ್ದಾರೆ. ಈ ಚಕಮಕಿಯಲ್ಲಿ ಮೃತ ಪೊಲೀಸ್ ಸಿಬ್ಬಂದಿಯನ್ನು ಸಾಹಿಬ್‍ಗಂಜ್ ಜಿಲ್ಲೆಯ ನಿವಾಸಿ ಕಾನ್ಸ್‍ಟೆಬಲ್ ರವಿಕುಮಾರ್ ಮಿಶ್ರಾ, ಸಂತೋಷ್ ಯಾದವ್ ಎಂದು ಗುರುತಿಸಲಾಗಿದೆ. ಈ ವೇಳೆ ಮೀನು ವ್ಯಾಪಾರಿಯ ಮನೆಯಲ್ಲಿದ್ದ ಇತರ ಮೂವರು ಗಾಯಗೊಂಡರು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಗೆ ನಾಮಕರಣ ಕುರಿತು ಒಕ್ಕಲಿಗರ ಸಭೆ
ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Two, police, personnel, killed, gunfight,