ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರು ಬಂಧನ

Social Share

ಬೆಂಗಳೂರು,ಫೆ.4- ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ ಹಣ, ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ದರೋಡೆಕೋರರನ್ನು ಬಂಧಿಸಿರುವ ಕಲಾಸಿಪಾಳ್ಯಠಾಣೆ ಪೊಲೀಸರು 45000 ರೂ. ನಗದು ಸೇರಿದಂತೆ ಒಟ್ಟು 7.20ಲಕ್ಷ ರೂ. ಮೌಲ್ಯದ 4 ದ್ವಿ ಚಕ್ರ ವಾಹನಗಳು, 25 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಟನ್ಪೇಟೆ ಸಿದ್ದಾರ್ಥ ನಗರದ ನಿವಾಸಿಗಳಾದ ಮೊಹಮ್ಮದ್ ಯುನೂಸ್ ಅಲಿಯಾಸ್ ಯುನೂಸ್ (35) ಮತ್ತು ಮೊಹ್ಮದ್ ಫಯಾಜ್(34)ಬಂಧಿತ ಆರೋಪಿಗಳು.

ಗೋಂವಿದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಚಾಕು ತೊರಿಸಿ ಸಾರ್ವಜನಿಕರನ್ನು ಬೆದರಿಸಿ ನಡೆಸಿದ್ದ 2 ಮೊಬೈಲ್ ಫೋನ್ ರಾಬರಿ, ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5,5000ರೂ. ನಗದು ರಾಬರಿ, ಮೈಕೋಲೇಔಟ್ ಠಾಣೆ ಸರಹದ್ದಿನಲ್ಲಿ ನಡೆದ 36,966ರೂ. ನಗದು ಸುಲಿಗೆ, ಎಸ್.ಜೆ.ಪಾರ್ಕ್ ಠಾಣೆಯ ಸರಹದ್ದಿನ 15,000 ರೂ.ಹಣ ಸುಲಿಗೆ, ಹೆಣ್ಣೂರು ಠಾಣೆ ವ್ಯಾಪ್ತಿಯ 10,200 ರೂ. ಸುಲಿಗೆ, ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ 50.000 ರೂ.ಸುಲಿಗೆ, ಆರ್.ಟಿ.ನಗರ, ಬ್ಯಾಟರಾಯನ ಪುರ, ಕೆಂಗೇರಿ, ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 4ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ.

ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳ ನಾನಾ ರಣತಂತ್ರ

ಕಳೆದ ಜ.10 ರಂದು ರಮೇಶ್ ಬಾಬು ಎಂಬುವವರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿ ಚಾಕು ತೋರಿಸಿ ಹೆದರಿಸಿ 50,000 ರೂ. ಹಣ ಕಿತ್ತುಕೊಂಡು ಹೋಗಿದ್ದ ಬಗ್ಗೆ ಕಲಾಸಿಪಾಳ್ಯಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ನಗರದ ಬೇರೆ ಬೇರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಾಕು ತೋರಿಸಿ ಹೆದರಿಸಿ ಮೊಬೈಲ್ ಫೋನ್, ನಗದು ರಾಬರಿ ಮಾಡಿದ್ದಲ್ಲದೆ, ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು ಆಸ್ತಿ ದಾಖಲೆ ಸಲ್ಲಿಸಲು ಮಾ. 31 ಕೊನೆ ದಿನ

ಡಿಸಿಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಶ್ರೀಗಿರಿ ಕೆ.ಸಿ. ನೇತೃತ್ವದಲ್ಲಿ ಕಲಾಸಿಪಾಳ್ಯ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜೇಗೌಡ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

two, robbers, Arrest, kalasipalya, police,

Articles You Might Like

Share This Article