ಬೆಂಗಳೂರು,ಫೆ.20- ನೆರೆಮನೆಯವರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಇಬ್ಬರು ಯುವಕರಿಗೆ ಆಕಸ್ಮಿಕವಾಗಿ ಗುಂಡುಗಳು ತಗುಲಿ ಮೃತಪಟ್ಟಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಂದು ಬೆಳಗ್ಗೆ ನಡೆದಿದೆ.
ಬಾಳೆಹೊನ್ನೂರು ಸಮೀಪದ ಚಂದ್ರುಳ್ಳಿ ಬಿದರೆ ಗ್ರಾಮದ ಪ್ರಕಾಶ್ ಮತ್ತು ಪ್ರವೀಣ್ ಗುಂಡಿಗೆ ಬಲಿಯಾದ ಯುವಕರು. ಇಂದು ಬೆಳಗ್ಗೆ ಪ್ರಕಾಶ್ ಮತ್ತು ಪ್ರವೀಣ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಚಂದ್ರುಳ್ಳಿ ಗ್ರಾಮ ಬಳಿಯ ಉಜ್ಜಯಿನಿ ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಜಗಳ ನಡೆಯುತ್ತಿತ್ತು. ರಮೇಶ್ ಎಂಬಾತ ಸಿಂಗಲ್ ಬ್ಯಾರಲ್ ಗನ್‍ನಿಂದ ಮಹಿಳೆಗೆ ಹೊಡೆಯಲು ಮುಂದಾದಾಗ ಈ ಇಬ್ಬರು ಯುವಕರು ಅದನ್ನು ಗಮನಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ.
ಐಎಎಸ್ ಅಧಿಕಾರಿ ನಗ್ನ ಚಿತ್ರಗಳನ್ನು ಕಳಿಸಬಹುದಾ..? : ರೂಪಾ ಪ್ರಶ್ನೆ
ಆ ವೇಳೆ ರಮೇಶ್ ಅವರ ಕೈಯಲ್ಲಿದ್ದ ಕೋವಿಯಿಂದ ಆಕಸ್ಮಿವಾಗಿ ಗುಂಡುಗಳು ಹಾರಿ ಯುವಕರಿಗೆ ತಗುಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಬಾಳೆಹೊನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Two, shot, dead, balehonnur,