ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆ, ಇಬ್ಬರು ಉಗ್ರರು ಫಿನಿಷ್

Social Share

ಶ್ರೀನಗರ,ಸೆ.25- ಇಂದು ಬೆಳಗ್ಗೆ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಕುಪ್ವಾರ ಜಿಲ್ಲೆಯ ಮಜೀಲ್ ಪ್ರದೇಶದ ಗಡಿ ಬಳಿ ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆಯ ಅಕಾರಿಗಳು ತಿಳಿಸಿದ್ದಾರೆ.

ಇವರ ಬಳಿ ಇದ್ದ ಎರಡು ಎಕೆ47 ಬಂದೂಕು, ಗುಂಡುಗಳು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪಾಕ್ ಮೂಲದವರು ಎಂದು ಹೇಳಲಾಗುತ್ತಿದ್ದರೂ ಇನ್ನು ಖಚಿತವಾಗಿಲ್ಲ.

ಭಾರತದ ಗಡಿಯೊಳಗೆ ಉಗ್ರರು ನುಗ್ಗಿರುವ ಮಾಹಿತಿ ಮೇರೆಗೆ ಸೇನೆ ಇಂದು ಕಾರ್ಯಾಚರಣೆ ನಡೆಸಿತ್ತು ಎಂದು ತಿಳಿದುಬಂದಿದೆ.

Articles You Might Like

Share This Article