ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, ಮೂವರು ಯೋಧರು ಹುತಾತ್ಮ

Social Share

ಜಮ್ಮು, ಆ.11-ಕಾಶ್ಮೀರದ ರಜೌರಿ ಜಿಲ್ಲೆಯ ಪರ್ಗಲ್ ಸೇನಾ ಶಿಬಿರದ ಮೇಲೆ ಇಂದು ಮುಂಜಾನೆ ಆತ್ಮಾಹುತಿ ಭಯೋತ್ಪಾದಕರ ಗುಂಪು ದಾಳಿ ನಡೆಸಿ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ.ಕ್ಷಿಪ್ರ ಕಾರ್ಯಾಚರನೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಶಸ್ತ್ರ ಸಜ್ಜಿತ ಭಯೋತ್ಪಾದಕರು ಮೂದಲು ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದಾಗ ಎಚ್ಚೆತ ಕಾವಲುಗಾರ ಯೋಧ ಎಚ್ಚರಿಸಿ ಪ್ರತಿರೋಧಿಸಿದ್ದಾನೆ. ಈ ನಡುವೆ ಭಯೋತ್ಪಾದಕರ ಗುಂಡು ಹಾರಿಸಿದ್ದಾರೆ ನಂತರ ಗುಂಡಿನ ಚಕಮಕಿ ನಡೆಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಹೇಳಿದ್ದಾರೆ.

ಕತ್ತಲೆಯಲ್ಲಿ ಜಾಗದಲ್ಲಿ ಒಳ ನುಸುಳಲು ಪ್ರಯತ್ನಿಸುವಾಗ ಇಬ್ಬರು ಭಯೋತ್ಪಾದಕರು ಪತ್ತೆಯಾಗಿದ್ದಾರೆ. ಅವರನ್ನು ಸದೆಬಡಿಯಲಾಗಿದೆ. ಇದರ ನಡುವೆ ಐವರು ಯೋದರು ಗಾಯಗೊಂಡರು ಅದರಲ್ಲಿ ಮೂವರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದರ್ಹಾಲ್ ಪೊಲೀಸ್ ಠಾಣೆಯಿಂದ ಸುಮಾರು ಆರು ಕಿಲೋಮೀಟರ್ ಈ ಸೇನಾ ಶಿಬಿರವಿದ್ದು ಸಂಚು ಮಾಡಿ ಈ ದಾಳಿ ನಡೆಸಲಾಗಿದೆ.ಕಣಿವೆಯಾದ್ಯಂತ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಆಗಮಿಸಿ ಉಗ್ರರ ಭೇಟೆ ಕಾರ್ಯಾಚರಣೆ ಅರಂಭಿಸಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ

Articles You Might Like

Share This Article