ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ, ಜನಜೀವನ ಅಸ್ತವ್ಯಸ್ತ

Social Share

ಟೊಕಿಯೋ, ಸೆ.19: ಜಪಾನ್‍ಗೆ ನೆನ್ಮಡೋಲ್ ಚಂಡಮಾರುತ ಅಪ್ಪಳಿಸಿದ್ದು, ಕ್ಯುಶು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಹಲವು ಮನೆಗಳು ನಾಶಗೊಂಡಿದ್ದು, ವಾಹನಗಳು ನೀರಿನಲ್ಲಿ ಮುಳುಗಿ ಹಲವು ಅವಾಂತರಗಳು ಸಂಭವಿಸಿದೆ.
ಇಂದು ಮುಂಜಾನೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಾಹಣಾ ಅಧಿಕಾರಿ ಯೋಶಿಹರು ಮೇಡಾ ಅವರು ಹೇಳಿದ್ದಾರೆ.

ಸುಮಾರು 162 ಕಿ.ಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದ್ದು, ಈಗಾಗಲೇ ಸುಮಾರು ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನೈರುತ್ಯ ಜಪಾನ್ ಕಾಗೋ ಸೀಮಾನಗರದಲ್ಲಿ ಕ್ರೈಂ ಒಂದು ಮುರಿದು ಬಿದ್ದಿದೆ. ಈ ನಗರದಲ್ಲಿ ಮೆಟ್ರೋ ರೈಲು ಹಾಗೂ ವಿಮಾನ ಸೇನೆಯನ್ನು ಸ್ಥಗಿತಗೊಳಿಸಲಾಗಿದೆ.

ಹಲವು ಹೆದ್ದಾರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮೊಬೈಲ್ ಸೇವೆಯೂ ಕೂಡ ಅಸ್ತ-ವ್ಯಸ್ತಗೊಂಡಿದೆ.
ಚಂಡಮಾರುತವು ರಾಜಧಾನಿ ಟೊಕಿಯೋ ಮತ್ತು ಈಶಾನ್ಯ ಜಪಾನ್‍ನ ಮೇಲೆ ಹಾzು ಹೋಗಲಿದ್ದು, ಇದರಿಂದಾಗಿ ಬಾರಿ ಮಳೆ ಸುರಿಯುತ್ತಿದೆ. ಒಟ್ಟಾರೆ ಜಪಾನ್ ನಲ್ಲಿ ಚಂಡಮಾರುತ ಅಬ್ಬರದಿಂದ ಹಲವು ವಿನಾಶಗಳು ನಡೆಯುತ್ತಿವೆ.

Articles You Might Like

Share This Article