ಶಾಂಘೈಗೆ ಅಪ್ಪಳಿಸಿದ ಚಂಡಮಾರುತ, ಭಾರಿ ಅವಾಂತರ ಸೃಷ್ಟಿ

Social Share

ಬೀಜಿಂಗ್, ಸೆ 15 (ಎಪಿ) ಶಾಂಘೈಗೆ ಅಪ್ಪಳಿದ ಚಂಡಮಾರುತ ಭಾರಿ ಅವಾಂತರ ಸೃಷ್ಟಿಸಿದ್ದು ಹಲವಡೆ ರಸ್ತೆ,ವಾಹನ ಹಾಳಾಗಿದೆ ಶಾಂಘೈನ ದಕ್ಷಿಣದ ನಿಂಗ್ಬೋ ನಗರದಲ್ಲಿ ರಾತ್ರಿಯಿಡೀ ಭಾರಿ ಮಳೆಯ ಕಾರಣ ರಸ್ತೆಗಳಲ್ಲಿ ನೀರು ಪ್ರವಾಹದ ರೀತಿ ಹರಿದು ಕೆಲ ಸ್ಕೂಟರ್ ಮತ್ತು ಕಾರುಗಳು ನೀರಿನಲ್ಲಿ ಮುಳುಗಿವೆ ಕೆಲವು ಕೊಚ್ಚಿಹೋಗಿದೆ. ವಸತಿ ಸಂಕೀರ್ಣವು ನೀರಿನಿಂದ ಆವೃತವಾಗಿದ್ದು ಹಲವು ಕಡೆ ರಸ್ತೆಗಲನ್ನು ಮುಚ್ಚಲಾಗಿದೆ.ಪರಿಹಾರ ಕಾರ್ಯ ಆರಂಭವಾಗಿದೆ.

ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022)

ಗಂಟೆಗೆ 125 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು ಭಾರಿ ಮಳೆ ಸುರಿಸಿದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಹಾನಿ ವರದಿಯಾಗಿಲ್ಲ ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತ ಇಂದು ಮಧ್ಯಾಹ್ನ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಯಾಂಗ್ಸು ಪ್ರಾಂತ್ಯಕ್ಕೂ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು ಅ ಭಾಗದಲ್ಲಿ ಶಾಲೆಯನ್ನು ರದ್ದುಗೊಳಿಸಿದೆ .ಶಾಂಘೈ ಮತ್ತು ಝೆಜಿಯಾಂಗ್ ಪ್ರಾಂತ್ಯದ ಇತರ ನಗರಗಳಲ್ಲಿ 1 ಮಿಲಿಯನ್‍ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

Articles You Might Like

Share This Article