ರಾಹುಲ್ ಪಾಕ್-ಚೀನಾ ಟೀಕೆಗೆ ಸಹಮತ ಇಲ್ಲ : ಅಮೆರಿಕ ಸ್ಪಷ್ಟನೆ

Social Share

ನವದೆಹಲಿ, ಫೆ.3- ಕಾಂಗ್ರೆಸ್ ಧುರೀಣ ರಾಹುಲ್‍ಗಾಂದಿ ಅವರು ಸಂಸತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮಾಡಿರುವ ಟೀಕೆಗೆ ಅಮೆರಿಕದ ಸಹಮತ ಇಲ್ಲ ಎಂದು ಅಮೆರಿಕ ರಾಷ್ಟ್ರದ ವಿದೇಶಾಂಗ ಇಲಾಖೆ ವಕ್ತಾರ ತಿಳಿಸಿದ್ದಾರೆ. ನಿನ್ನೆ ಸಂಸತ್ತಿನಲ್ಲಿ ಅನೇಕ ವಿಷಯಗಳ ಬಗ್ಗೆ ಸರ್ಕಾರವನ್ನು ಟೀಕಿಸಿದ ರಾಹುಲ್ ನ್ಯೂನ ವಿದೇಶಾಂಗ ನೀತಿ ಅನುಸರಿಸುತ್ತಿರುವ ಮೋದಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಎರಡು ಭಾರತಗಳ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಹರಿಹಾಯ್ದಿದ್ದರು.
ನೀವು ಗಣರಾಜ್ಯೋತ್ಸವಕ್ಕೆ ಓರ್ವ ಅತಿಥಿಯನ್ನು ಹೊಂದಲು ಏಕೆ ಸಾಧ್ಯವಾಗಲಿಲ್ಲ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ನಾವು ಸಂಪೂರ್ಣವಾಗಿ ಪ್ರ್ಯೇಕಿತರಾಗಿದ್ದೇವೆ ಮತತ್ತು ಆವೃತರಾಗಿದ್ದೇವೆ. ನೀವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ. ಇದು ನೀವು ಭಾರತದ ಜನತೆಗೆ ಎಸಗಿದ ಏಕೈಕ ಬೃಹತ್ ಅಪರಾಧವಾಗಿದೆ ಎಂದು ರಾಹುಲ್ ದೂಷಿಸಿದ್ದರು.
ರಾಹುಲ್ ಗಾಂಧಿ ಅವರ ಟೀಕೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ಸಂಬಂಧಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಅವರು ನಾನು ಈ ಟೀಕೆಗಳನ್ನು ಅನುಮೋದಿಸುವುದಿಲ್ಲ ಎಂದು ಉತ್ತರಿಸಿದರು.
ನಾನು ಪಾಕಿಸ್ತಾನ ಮತ್ತು ಚೀನಾಕ್ಕೆ ಅವರ ಸಂಬಂಧಗಳ ಬಗ್ಗೆ ಮಾತನಾಡಲು ಬಿಡುತ್ತೇನೆ. ನಾನು ಖಂಡಿತವಾಗಿಯೂ ಆ ಟೀಕೆಗಳಿಗೆ ಸಹಮತ ವ್ಯಕ್ತಪಡಿಸುವಿದಲ್ಲ. ದೇಶಗಳಿಗೆ ಅಮೆರಿಕ ಮತ್ತು ಪಿಆರ್‍ಸಿ ನಡುವೆ ಆಯ್ಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಪ್ರೈಸ್ ನುಡಿದರು. ಹೀಗಿದ್ದರೂ ಅಮೆರಿಕದ ಸಹಭಾಗಿತ್ವ ಹಲವಾರು ಅನುಕೂಲಗಳಿಂದ ಕೂಡಿದೆ. ಪಾಕಿಸ್ತಾನವು ಅಮೆರಿಕದ ಕಾರ್ಯತಂತ್ರ ಸಹಭಾಗಿ ದೇಶವಾಗಿದೆ ಎಂದು ಪ್ರೈಸ್ ಪ್ರತಿಪಾದಿಸಿದರು.

Articles You Might Like

Share This Article