ವಾಷಿಂಗ್ಟನ್, ಜೂ.22 – ಇಂದು ಮೊಜಾನೆ ಇರಾನ್ನ ಮೂರು ನೆಲೆಗಳನ್ನು ಗುರಿಯಾಗಿಸಿ ಅಮೆರಿಕದ ವಾಯು ಪಡೆ ಹಠಾತ್ ದಾಳಿ ನಡೆಸಿ ನಾಶಪಡಿಸಿದೆ.ಇದು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಶಿರಚ್ಛೇದ ಮಾಡುವ ಪ್ರಯತ್ನ ಎನ್ನಲಾಗಿದ್ದು ಸ್ವತಹ। ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿ ಖಚಿತಪಡಿಸಸಿದ್ದಾರೆ. ಇಸ್ರೇಲ್‌ನ ಜೊತೆ ಈಗ ಅಮೆರಿಕ ಅಧಿಕೃತವಾಗಿ ಯುದ್ಧಕ್ಕಿಳಿದಿದೆ.
ಟೆಹ್ರಾನ್‌ನ ಬೆದರಿಕೆಯ ಮಧ್ಯೆ ಈ ಬೆಳವಣಿಗೆ ವ್ಯಾಪಕ ಪ್ರಾದೇಶಿಕ ಸಂಘರ್ಷವನ್ನು ಹುಟ್ಟುಹಾಕಬಹುದು ಎಂಬ ಭಯ ಶುರುವಾಗಿದೆ.’ಇರಾನ್ -ಇಸ್ರೇಲ್ ನಡುವಿನ ಸಂಘರ್ಷದ ಒಂದು ವಾರದ ನಂತರ, ಅಮೆರಿಕ ರಂಗ ಪ್ರವೇಶಿಸಿದೆ.
ಅಮೆರಿಕದ ರಹಸ್ಯ ಬಾಂಬರ್‌ಗಳು ಮತ್ತು ಅವು ಮಾತ್ರ ಸಾಗಿಸಬಹುದಾದ 30,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಆಳವಾದ ಭೂಗತದಲ್ಲಿ ಹೂತುಹೋಗಿರುವ ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿದ ಭಾರೀ-ಭದ್ರತಾ ತಾಣಗಳನ್ನು ನಾಶಮಾಡಿದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.
ಫೋರ್ಡೋ, ನಟಾಂಜ್ ಮತ್ತು ಎಸಹಾನ್ ಸೇರಿದಂತೆ ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲಾ ಯುದ್ಧ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್ ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಿದೆ ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಹಿಂತಿರುಗಿದೆ ಎಮದಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ