ಕುಲ್ಡಿಗೆ, ಫೆ. 3- ನಾಯಕ ಯಶ್‍ಧೂಳ್(110 ರನ್, 10 ಬೌಂಡರಿ, 1 ಸಿಕ್ಸರ್) ಹಾಗೂ ಬೌಲರ್ ವಿಕ್ಕಿ ಓಸ್ಟಾಲ್ ( 3 ವಿಕೆಟ್)ರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಅಂಡರ್ 19 ತಂಡವು ಆಸ್ಟ್ರೇಲಿಯಾ ವಿರುದ್ಧ 94 ರನ್‍ಗಳ ವಿರೋಚಿತ ಗೆಲುವು ಸಾಸುವ ಮೂಲಕ ಸತತ 5ನೆ ಅಂಡರ್ 19 ವಿಶ್ವಕಪ್‍ಗೆ ಫೈನಲ್‍ಗೇ ಪ್ರವೇಶಿಸಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 37 ರನ್‍ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರರಾದ ರಘುವಂಶಿ( 6 ರನ್) ಹಾಗೂ ಹರ್ನೋರ್ ಸಿಂಗ್(16 ರನ್, 3 ಬೌಂಡರಿ)ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಯಶ್- ರಶೀದ್ ಬ್ಯಾಟಿಂಗ್‍ಗೆ ಆಸ್ಟ್ರೇಲಿಯಾ ಶೇಕ್:
ಕಡಿಮೆ ಮೊತ್ತಕ್ಕೆ ಕುಸಿಯುವ ಅಪಾಯಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ 3ನೆ ವಿಕೆಟ್‍ಗೆ ಜೊತೆಗೂಡಿದ ನಾಯಕ ಯಶ್ ಧೂಳ್ ಹಾಗೂ ಶೇಖ್ ರಶೀದ್ ಅವರು ಆಸರೆಯಾದರು.
ಈ ಆಟಗಾರರು ಆರಂಭದಲ್ಲಿ ತಾಳ್ಮೆಯುತ ಆಟಕ್ಕೆ ಮುಂದಾದರೂ 35 ಓವರ್ ಕಳೆದ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಈ ನಡುವೆ ಶತಕ ಗಳಿಸಿದ ನಾಯಕ ಯಶ್(110ರನ್) ತನ್ನಲ್ಲದ ತಪ್ಪಿಗೆ ಔಟಾದರು, ಮರು ಎಸೆತದಲ್ಲೇ ಶತಕ ಅಂಚಿನಲ್ಲಿದ್ದ ಶೇಖ್ ರಶೀದ್( 94 ರನ್, 8 ಬೌಂಡರಿ, 1 ಸಿಕ್ಸರ್) ಕೂಡ ನಿಸ್‍ಬತ್‍ರ ಬೌಲಿಂಗ್‍ನಲ್ಲಿ ಔಟಾದರು. ಈ ಜೋಡಿಯು 3ನೆ ವಿಕೆಟ್‍ಗೆ 204 ರನ್‍ಗಳ ಉಪಯುಕ್ತ ಜೊತೆಯಾಟ ನೀಡಿದರು.
ನಂತರ ಕೊನೆಯ ಹಂತದಲ್ಲಿ ದಿನೇಶ್ ಬಾನ( 20 ರನ್, 2 ಬೌಂಡರಿ, 2 ಸಿಕ್ಸರ್) ಸೋಟಕ ಆಟದಿಂದಾಗಿ ಭಾರತ ನಿಗತ 50 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 290 ರನ್ ಗಳಿಸಿತು.
ಆಸ್ಟ್ರೇಲಿಯಾಕ್ಕೆ ಆಘಾತ:
ಭಾರತ ತಂಡ ಅನುಭವಿಸಿದಂತೆ ಆಸ್ಟ್ರೇಲಿಯಾ ಕೂಡ ಭಾರತದ ಬೌಲರ್‍ಗಳಾದ ರವಿಕುಮಾರ್, ರಘುವಂಶಿಯವರ ಬೌಲಿಂಗ್ ಜಾದೂ ಎದುರು ಆರಂಭಿಕ ಆಘಾತ ಅನುಭವಿಸಿತು.
ತಂಡದ ಮೊತ್ತ 101 ರನ್‍ಗಳಾಗಿದ್ದ ಪ್ರಮುಖ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಲಚನ್‍ಶಾ (51 ರನ್, 4 ಬೌಂಡರಿ) ನೆರವಿದ್ದರೂ ಕೂಡ 41.5 ಓವರ್‍ಗಳಲ್ಲಿ 194 ರನ್ ಗಳಿಸಿ ಅಲೌಟಾಗುವ ಮೂಲಕ 94 ರನ್‍ಗಳಿಂದ ಸೋಲು ಕಂಡಿತು.
ಭಾರತ ಪರ ವಿಕ್ಕಿ ಓಸ್ಟಾಲ್ 3, ನಿಶಾಂತ್ ಸಿಂಧು 2, ತಾಂಬೆ, ರಘುವಂಶಿ ತಲಾ 1 ವಿಕೆಟ್ ಕಬಳಿಸಿದರು. ಯಶ್ ಧೂಳ್ ಪಂದ್ಯ ಪುರುಷೋತ್ತರಾದರು.
ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
