ಅಬುಧಾಬಿಯಲ್ಲಿ ನಡೆದ ಡ್ರೋನ್ ದಾಳಿ ಖಂಡಿಸಿದ ಭಾರತ

ವಿಶ್ವಸಂಸ್ಥೆ,ಜ.20- ಇಬ್ಬರು ಭಾರತೀಯರ ಸಾವಿಗೆ ಕಾರಣವಾದ ಅಬುಧಾಬಿಯ ಡ್ರೋನ್ ದಾಳಿಯನ್ನು ಭಾರತ ಉಗ್ರವಾಗಿ ಖಂಡಿಸಿದೆ. ಅಮಾಯಕ ನಾಗರಿಕರು ಮತ್ತು ಮೂಲಸೌಕರ್ಯದ ಮೇಲೆ ನಡೆದಿರುವ ಈ ದಾಳಿ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಭಾರತ ಹೇಳಿದೆ.

ಇಂಥ ಘೋರ ಭಯೋತ್ಪಾದನಾ ಕೃತ್ಯಗಳ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒಟ್ಟಾಗಿ ನಿಂತು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಭಾರತ ಕರೆ ನೀಡಿದೆ. ಮಧ್ಯಪ್ರಾಚ್ಯದ ಕುರಿತು ನಿನ್ನೆ ನಡೆದ ಭದ್ರತಾ ಮಂಡಲಿಯ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ರಾಯಭಾರಿಗೆ ಭಾರತದ ಕಾಯಂ ಪ್ರತಿನಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರು ಅಬುಧಾಬಿ ದಾಳಿಯನ್ನು ಅತ್ಯುಗ್ರವಾಗಿ ಖಂಡಿಸಿದರು.

ಇಬ್ಬರು ಭಾರತೀಯರೂ ಸೇರಿದಂತೆ ಮೂವರು ಅಮಾಯಕರ ಸಾವಿಗೆ ಕಾರಣವಾದ ಈ ದಾಳಿ ಎಲ್ಲ ನಾಗರಿಕ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

Sri Raghav

Admin