ಯುಎಇ ಮೇಲೆ ಯೆಮೆನ್ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ

Social Share

ದುಬೈ, ಜ.31- ಇಸ್ರೇಲ್ ಅಧ್ಯಕ್ಷರ ಭೇಟಿ ನೀಡುತ್ತಿದ್ದಂತೆ ಇಂದು ಮುಂಜಾನೆ ಯೆಮೆನ್ ಹೌತಿ ಬಂಡುಕೋರರು ಹಾರಿಸಿದ ಕ್ಷಿಪಣಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ ತಡೆಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರ ಯುಎಇಗೆ ಭೇಟಿಯ ನಡುವೆ ಈ ದಾಳಿ ಪರ್ಷಿಯನ್ ಗಲ್ಪ್ ವಲಯದಲ್ಲಿ ಉದ್ವಿಗ್ನತೆಯನ್ನು ಉತ್ತೇಜಿಸಿದಂತೆ ಎಂದು ವಿಶ್ಲೇಶಿಸಲಾಗಿದೆ.
ಆ ದಾಳಿಗಳು ನಮಗೆ ಒಂದು ಪ್ರಮುಖ ಸವಾಲಾಗಿದೆ ನೆರೆಹೊರೆಯ ಸುರಕ್ಷಿತೆಗೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಿಗೆ ತೊಡಕಾಗುತ್ತದೆ ಹೇಳಿದೆ. ದಾಳಿಯಿಂದ ಯಾವುದೇ ನಷ್ಟವಾಗಿಲ್ಲ ಕ್ಷಿಪಣಿಯ ಅವಶೇಷಗಳು ಜನನಿಬಿಡ ಪ್ರದೇಶಗಳ ಹೊರಗೆ ಬಿದ್ದವೆ ಎಂದು ಸ್ತಳೀಯ ಮಾಧ್ಯಮ ಹೇಳಿದೆ.
ಘಟನೆ ಬಗ್ಗೆ ವೀಡಿಯೊ ಬಿಡುಗಡೆ ಮಾಡಿರುವ ಯುಎಇ ರಕ್ಷಣಾ ಸಚಿವಾಲ ಅಬುಧಾಬಿಯ ನೈಋತ್ಯಕ್ಕೆ 1,350 ಕಿಲೋಮೀಟರ್ ದೂರದ ಯೆಮೆನ್‍ನ ಅಲ್-ಜಾವ್ ಪ್ರಾಂತ್ಯದಲ್ಲಿ ಕ್ಷಿಪಣಿ ಲಾಂಚರ್ ನಾಶಪಡಿಸಿರುವ ತುಣುಕು ಹಾಕಿದೆ.

Articles You Might Like

Share This Article