ನವದೆಹಲಿ,ಜ.17- ಅಬುಧಾಬಿ ರಾಜಮನೆತನದ ಉದ್ಯೋಗಿಯಂತೆ ನಟಿಸಿದ ವ್ಯಕ್ತಿಯೊಬ್ಬ ದೆಹಲಿಯ ಫೈವ್ ಸ್ಟಾರ್ ಹೋಟೆಲ್ನ 23 ಲಕ್ಷ ಬಿಲ್ ಪಾವತಿಸದೆ ನಾಪತ್ತೆಯಾಗಿದ್ದಾರೆ.
ಅಬುಧಾಬಿ ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡಿದ್ದ ಮಹಮ್ಮದ್ ಷರೀಫ್ ಎಂಬಾತ ಕಳೆದ ನಾಲ್ಕು ತಿಂಗಳುಗಳಿಂದ ದೆಹಲಿ ಲೀಲಾ ಪ್ಯಾಲೇಸ್ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದ.
ಆದರೆ, ಆತ ಇದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದು ನಮ್ಮ ಹೋಟೆಲ್ಗೆ 23 ಲಕ್ಷ ಬಿಲ್ ಪಾವತಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ಹೋಟೆಲ್ ಆಡಳಿತ ಮಂಡಳಿ ದೂರು ನೀಡಿದ್ದು, ವಂಚಕನ ಸೆರೆಗಾಗಿ ಜಾಲ ಬೀಸಲಾಗಿದೆ.
ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ
ನಾನು ಯುಎಇ ನಿವಾಸಿ ಮತ್ತು ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿದ್ದ ವಂಚಕ ಪರಾರಿಯಾಗುವ ಮುನ್ನ ಹೋಟೆಲ್ನಲ್ಲಿದ್ದ ಬೆಳ್ಳಿ ಪಾತ್ರೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾನೆ ಎನ್ನಲಾಗಿದೆ.
UAE, royal family, staff, leaves, without, paying, bills, Hotel,