ದುಬೈ, ಜ.24- ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯನ್ನು ಗುರಿಯಾಗಿಸಿಕೊಂಡು ಸೋಮವಾರ ಮುಂಜಾನೆ ನಡೆಸಲಾದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದಿವೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜಧಾನಿಯನ್ನು ಗುರಿಯಾಗಿಸಿಕೊಂಡು ನಡೆದ ಹೊಸ ದಾಳಿ ಇದಾಗಿದೆ. ಕ್ಷಿಪಣಿ ತುಣುಕುಗಳು ನಿರುಪದ್ರವಿಯಾಗಿದ್ದು, ರಾಜಧಾನಿ ಅಬುಧಾಬಿ ಮೇಲೆ ಬಿದ್ದಿವೆ ಎಂದು ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ತಿಳಿಸಿದೆ. ಆದಾಗ್ಯೂ ಎಮಿರೇಟ್ಸ್, ಯಾವುದೇ ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದೆ. ದುಷ್ಟ ದಾಳಿಗಳಿಂದ ರಾಜ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದುಬೈನ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ ಸೋಮವಾರ ಮುಂಜಾನೆ ಅಬುಧಾಬಿ ಮೇಲೆ ಬಾರೀ ಬೆಳಕು ಪ್ರಜ್ವಲಿಸುವುದು ಕಾಣಿಸುತ್ತದೆ. ಬೆಳಕಿನ ಬಿಂದುಗಳು ಆಕಾಶದಲ್ಲಿ ಪ್ರತಿಬಂಧಕ ಕ್ಷಿಪಣಿಗಳಂತೆ ಕಾಣುತ್ತವೆ. ಈ ದಾಳಿಯಿಂದ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆ ಕಾಲ ಸಂಚಾರ ವ್ಯತ್ಯಯವಾಗಿತ್ತು.
ತಕ್ಷಣಕ್ಕೆ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಯೆಮೆನ್ನ ಹೌತಿ ಬಂಡುಕೋರರ ಬೆದರಿಕೆ ಬಳಿಕ ಒಂದು ವಾರದಲ್ಲೇ ಈ ದಾಳಿ ನಡೆದಿದೆ. ಈ ಮೊದಲು ನಡೆದ ದಾಳಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದು, ಆರು ಜನ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅರಬ್ಬೆಂಲಬಲಿತ ಸೌದಿ ನೇತೃತ್ವದ ಒಕ್ಕೂಟ ಯೆಮೆನ್ ಅನ್ನು ಗುರಿಯಾಗಿಸಿಕೊಂಡು ವಾಯುದಾಳಿಗಳನ್ನು ನಡೆಸಿತ್ತು.
ಇದರಲ್ಲಿ 80 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಜೊತೆಗೆ ಯೆಮೆನ್ಅಿನ್ನು ಇಂಟರ್ನೆಟ್ನಿಂದ ಹೊರಹಾಕಿತು. ಇದಕ್ಕೆ ಪ್ರತಿಕಾರ ಮಾಡುವುದಾಗಿ ಹೌತಿಗಳು ಬೆದರಿಕೆ ಹಾಕಿದ್ದರು.
ಭಾನುವಾರ, ಸೌದಿ ನೇತೃತ್ವದ ಒಕ್ಕೂಟವು ಸೌದಿ ಅರೇಬಿಯಾದ ಜಿಜಾನ್ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಹೌತಿ-ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಬಿದ್ದಿತ್ತು, ಅದರಲ್ಲಿ ವಿದೇಶಿಯರಿಗೆ ಗಾಯವಾಗಿದ್ದವು ಎಂದು ಸುದ್ದಿ ಸಂಸ್ಥೆ ಹಿಂದಿನ ದಿನದ ಘಟನೆಯನ್ನು ನೆನಪಿಸಿಕೊಂಡಿದೆ.
