ಉದಯಪುರ,ಡಿ.4- ಜಿ-20 ಶೃಂಗದ ಸದಸ್ಯತ್ವ ಹೊಂದಿರುವ ದೇಶದ ಪ್ರತಿನಿಧಿಗಳ ಸಭೆ ರಾಜಸ್ಥಾನದ ಉದಯಪುರದಲ್ಲಿಂದು ನಡೆದಿದೆ. ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಭೆ ಇದಾಗಿದ್ದು, ಪ್ರಧಾನಿ ನರೇಂದ್ರಮೋದಿ ಶುಭ ಹಾರೈಸಿದ್ದಾರೆ.
ಕೆರೆಗಳ ನಗರ ಉದಯಪುರ, ವಿದೇಶಿ ಅತಿಥಿಗಳನ್ನು ಸತ್ಕರಿಸಲು ಸಂಭ್ರಮಿಸುತ್ತದೆ. ಜಿ-20 ಶೃಂಗದ ರಾಷ್ಟ್ರಗಳ ಕಾರ್ಯಾಂಗದ ಪ್ರತಿನಿಧಿಗಳು ರಾಜಸ್ಥಾನದ ಸೌಂದರ್ಯವನ್ನು ಸವಿಯಲಿದ್ದಾರೆ ಎಂದು ಹೇಳಿದ್ದಾರೆ.
ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಜೊತೆ ಆಹ್ವಾನಿತ ದೇಶಗಳ ಪ್ರತಿನಿಗಳು ಅಂತಾರಾಷ್ಟ್ರೀಯ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಲಿದ್ದು, ಆದ್ಯತೆ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಪ್ರೀತಿಸಿ ಮದುವೆಯಾಗಿ ಕಳ್ಳತನಕ್ಕಿಳಿದಿದ್ದ ದಂಪತಿ ಅರೆಸ್ಟ್
ಮೊದಲ ಶೆರ್ಪ ಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಭಾರತೀಯ ಸಂಸ್ಕøತಿ, ಕಲಾಶ್ರೀಮಂತಿಕೆ ಸೇರಿದಂತೆ ವಿವಿಧ ಪ್ರಾಧಿಕಾರಗಳ ಪರಿಚಯ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ.
2030ರ ವೇಳೆಗೆ ಜಾಗತಿಕ ಸವಾಲುಗಳು ಮತ್ತು ಪರಿಹಾರಗಳ ಬಗ್ಗೆ ವಿಷಯಸೂಚಿಗಳನ್ನು ನಿರ್ಧರಿಸಿರುವುದು ಇದಕ್ಕೆ ಪೂರಕವಾದ ರೂಪುರೇಷೆಗಳನ್ನು ರೂಪಿಸಿರುವುದು ಪ್ರಶಂಸನೀಯ ಸಾಧನೆ ಮತ್ತು ಶತಮಾನದ ಬಹು ಬಿಕ್ಕಟ್ಟುಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ಸಾಫ್ಟ್ ವೇರ್ ಇಂಜಿನಿಯರ್ ಅಪಹರಿಸಿದ್ದ ನಾಲ್ವರ ಬಂಧನ, ಕಾರು ವಶ
ಮುಂದಿನ ಹಂತದ ಸಭೆಗಳ ಬಗ್ಗೆಯೂ ಕಾರ್ಯಸೂಚಿಯನ್ನು ತಯಾರಿಸಲಾಗುತ್ತದೆ. ಡಿ.1ರಿಂದ ಜಿ.20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡಿರುವ 2023ರ ನ.30ರವರೆಗೆ ಅಧ್ಯಕ್ಷೀಯ ಜವಾಬ್ದಾರಿಯನ್ನು ನಿಭಾಯಿಸಲಿದೆ.
ಈ ಸಮಯದಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಮೋದಿ ಈ ಮೊದಲೇ ಹೇಳಿದ್ದಾರೆ.
Udaipur, host, G20, Sherpa, meeting, 4 Dec,