ನವದೆಹಲಿ,ಜ.31- ಕಳೆದ 8 ವರ್ಷಗಳಲ್ಲಿ ವಿಮಾನ ಯಾನ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದ್ದು, ಮುಂದಿನ ತಿಂಗಳ ವೇಳೆಗೆ ದೇಶದಲ್ಲಿ 148 ನೇ ವಿಮಾನ ನಿಲ್ದಾಣಗಳು ಕಾರ್ಯಾಚರಿಸಲಿವೆ ಎಂದು ಜೋತಿರಾತ್ಯ ಸಿಂಯಾ ಹೇಳಿದ್ದಾರೆ.
ಜಮೆಶ್ಡಪುರದಿಂದ ಕೋಲ್ಕತ್ತಾಗೆ ಪ್ರಾದೇಶಿಕ ಇಂಡಿಯಾ ಒನ್ ಏರ್ರ್‍ಲೈನ್ ಸೇವೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಮುಂದಿನ ತಿಂಗಳು ಕರ್ನಾಟಕದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದನ್ನು ಪ್ರಸ್ತಾಪಿಸಿದರು.
ಕಳೆದ 20 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳು ಮುಚ್ಚುವುದನ್ನೇ ನೋಡಲಾಗುತ್ತಿತ್ತು. ನಮ್ಮ ಸರ್ಕಾರ ಹೊಸ ಆಯಾಮ ನೀಡಿದೆ. ದೇಶದಲ್ಲಿ ಪ್ರಾದೇಶಿಕ ವಿಮಾನ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ಸರಕು ಸಾಗಾಣಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಗೆ ಚೈತನ್ಯ ನೀಡಲು ಫೆಬ್ರವರಿಯಲ್ಲಿ ಮೋದಿ ಸರಣಿ ಪ್ರವಾಸ
ಕೇಂದ್ರ ಸರ್ಕಾರದ ಉಡೇ ದೇಶ್ ಕಾ ಅಮ್ ನಾಗರೀಕ್ (ಉಡಾನ್) ಯೋಜನೆಯಿಂದ ಪ್ರಾದೇಶಿಕವಾಗಿ ವಿಮಾನಯಾನ ಸೇವೆ ಒದಗಿಸಲು ಸ್ಟಾರ್ ಏರ್, ಇಂಡಿಯಾಒನ್‍ಏರ್, ಫ್ಲೈಬಿಗ್ ನಂತಹ ಸಂಸ್ಥೆಗಳು ಜನ್ಮ ತಳೆದಿವೆ. ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಕಳೆದ ಆರು ವರ್ಷಗಳಲ್ಲಿ ಸುಮಾರು 1.15 ಕೋಟಿ ಜನರ ಪ್ರಯಾಣಕ್ಕೆ ನೆರವು ನೀಡಿದೆ.
ದೆಹಲಿ ಸಿಎಂ ಕೇಜ್ರಿವಾಲ್‍ಗೆ ಕೊಲೆ ಬೆದರಿಕೆ
2013-14ರಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74 ಇತ್ತು. ಜೆಮ್ಶೆಡ್ಪುರದಿಂದ ವಿಮಾನ ಸೇವೆ ಪ್ರಾರಂಭವಾಗುವುದರೊಂದಿಗೆ ಅವುಗಳ ಸಂಖ್ಯೆ 147 ಕ್ಕೆ ಏರಿದೆ ಎಂದರು.
UDAN, scheme, giving, birth, regional airlines, Jyotiraditya Scindia