ಮುಂಬೈ,ಮಾ.3-ಇತ್ತಿಚೆಗೆ ನಡೆದ ಉಪ ಚುನಾವಣೆಗಳ ಫಲಿತಾಂಶ ಗಮನಿಸಿದರೆ ದೇಶದಲ್ಲಿ ಬಿಜೆಪಿ ಮತ ಪ್ರಮಾಣ ಕುಸಿಯುತ್ತಿರುವುದನ್ನು ಖಾತರಿಪಡಿಸಿದೆ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದ ಕಸ್ಬಾಪೇಟ್ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾ ಆಘಾಡಿ ವಿಕಾಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಪರಾಭವಗೊಂಡ ನಂತರ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿಯದಲ್ಲಿ ಠಾಕ್ರೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಫಲಿತಾಂಶ ನೋಡಿದರೆ ಬಿಜೆಪಿ ಪಕ್ಷ ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಇಡಿ ದೇಶದಲ್ಲೇ ಮತದಾರರ ಮನಸ್ಸಿನಿಂದ ಮಾಸಿ ಹೋಗುತ್ತಿರುವುದಕ್ಕೆ ತಾಜಾ ಉದಾಹರಣೆ ಎಂದು ಅವರು ಬಣ್ಣಿಸಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮನೆಯಲ್ಲಿ 6 ಕೋಟಿ ಹಣ ಪತ್ತೆ
ನಾವು ಈ ಫಲಿತಾಂಶದ ಸಂಭ್ರಮಾಚರಣೆಯನ್ನು ಪೂನಾದಾದ್ಯಂತ ಆಚರಿಸುತ್ತಿದ್ದೇವೆ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಕಸ್ಬಾ ಪೇಠ್ ಉಪಚುನಾವಣೆಯಲ್ಲಿ ಎಂವಿಎ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಂಗೇಕರ್ ಅವರು ಬಿಜೆಪಿಯ ಹೇಮಂತ್ ರಸಾನೆ ಅವರನ್ನು 10,915 ಮತಗಳಿಂದ ಸೋಲಿಸಿದ್ದರು.
ಬಸ್ ಪಲ್ಟಿ : ಯುವತಿ ಸಾವು, 40 ಜನರಿಗೆ ಗಾಯ
ಪುಣೆಯ ಚಿಂಚ್‍ವಾಡ್ ಅಸೆಂಬ್ಲಿ ಸ್ಥಾನಕ್ಕೆ ನಡೆದ ಇನ್ನೊಂದು ಉಪಚುನಾವಣೆಯಲ್ಲಿ ಎಂವಿಎ ಸೋತಿರುವ ಕುರಿತು ಸಂಪಾದಕೀಯವು ಪ್ರಬಲ ಹೋರಾಟದ ನಂತರವೇ ಬಿಜೆಪಿ ಜಯಗಳಿಸಿದೆ ಎಂದು ಹೇಳಿದೆ.
Uddhav Thackeray, bjp, vote, share, falling, country,