ವಿಶ್ವವಿದ್ಯಾಲಯಗಳಲ್ಲಿ ದೇಶ ವಿಭಜನೆಯ ಕರಾಳ ದಿನದ ಕುರಿತು ಕಾರ್ಯಾಗಾರ

Social Share

ನವದೆಹಲಿ,ಆ.6-ವಿಶ್ವವಿದ್ಯಾಲಯದ ಅನುದಾನ ಆಯೋಗ ಆ.14ನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಲು ತನ್ನ ಅಧೀಧಿನದಲ್ಲಿರುವ ಎಲ್ಲ ಉನ್ನತ ಶಿಕ್ಷಣಸಂಸ್ಥೆಗಳಿಗೆ ಸೂಚನೆ ನೀಡಿದೆ. ಆಯೋಗದ ಅಧ್ಯಕ್ಷ ಎಂ.ಜಗದೀಶ್‍ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರಮೋದಿ ಅವರು ಆ.14ನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಕಳೆದ ವರ್ಷ ಘೋಷಿಸಿದ್ದಾರೆ.

ಅದರ ಅಂಗವಾಗಿ ಈ ವರ್ಷ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಅದರೊಂದಿಗೆ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆ.14ರಂದು ದೇಶವಿಭಜನೆಯ ಕುರಿತಂತೆ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಹಾಗೂ ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿದೆ ಎಂದರು.

1947ರ ಆ.14ರಂದು ದೇಶ ವಿಭಜನೆಯೊಂದಿಗೆ ಸಾಮಾಜಿಕ ವಿಭಜನೆಯ ವಿಷ ಸೇರ್ಪಡೆಯಾಗಿದೆ. ಅದನ್ನು ತೆಗೆದು ಹಾಕಬೇಕಿದೆ. ಸೌಹಾರ್ದತೆ ಕದಡುವ ಮತ್ತು ಸಾಮರಸ್ಯವನ್ನು ಬಲಹೀನಗೊಳಿಸುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಮಾಡುವ ಘಟನೆಗಳು ವಿಭಜನೆ ವೇಳೆ ನಡೆದಿವೆ. ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ, ಬಲಿದಾನ ಮಾಡಿದ ಸಾವಿರಾರು ಮಂದಿಯನ್ನು ಇದು ನೋಯಿಸಿತ್ತು ಎಂದು ಜಗದೀಶ್ ಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯವೂ ಕೂಡ ದೇಶ ವಿಭಜನೆಯ ಕಹಿ ನೆನಪನ್ನು ಅಧಿಕೃತವಾಗಿ ಗೆಜೆಟ್ ಮೂಲಕ ಹೊರಡಿಸಿದೆ. ಈಗಿನ ಪೀಳಿಗೆ ವಿಭಜನೆಯಿಂದ ಸ್ಥಿತ್ಯಂತರಗೊಂಡವರ ಕಷ್ಟ-ನಷ್ಟ ಮತ್ತು ನೋವುಗಳನ್ನು ಸ್ಮರಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಇಂದು ಉನ್ನತ ಶಿಕ್ಷಣ ನಿಯಂತ್ರಕರು ಎಲ್ಲಾ ವಿಶ್ವವಿದ್ಯಾಲಯಗಳಿಗೂ ಪತ್ರ ಬರೆದು ಕಾರ್ಯಕ್ರಮ ಆಯೋಜನೆಗೆ ಸೂಚನೆ ನೀಡಿದ್ದಾರೆ.

Articles You Might Like

Share This Article