ಯುಕೆ ಪ್ರಧಾನಿ ಲಿಜ್‍ಟ್ರಸ್ ಸರ್ಕಾರದ ಮತೊಬ್ಬ ಸಚಿವೆ ರಾಜೀನಾಮೆ

ಬ್ರಿಟನ್ ಸರ್ಕಾರದಲ್ಲಿ ಬಿರುಗಾಳಿ ಎದ್ದಿದ್ದು, ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‍ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Social Share

ಲಂಡನ್, ಅ.20- ಬ್ರಿಟನ್ ಸರ್ಕಾರದಲ್ಲಿ ಬಿರುಗಾಳಿ ಎದ್ದಿದ್ದು, ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‍ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಯುಕೆ ಪ್ರಧಾನಿ ಲಿಜ್‍ಟ್ರಸ್ ಅವರಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ಮಹಾರಾಷ್ಟ್ರದಲ್ಲಿ ನಿಷೇಧಿತ PFI ಸಂಘಟನೆಯ 4 ಸದಸ್ಯರ ಬಂಧನ

ಗೋವಾ ಮೂಲದ ತಂದೆ ಮತ್ತು ತಮಿಳು ಮೂಲದ ತಾಯಿಯ ಮಗಳಾದ ಬ್ರಾವರ್‍ಮನ್ 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಡ್ಜ್ ಟ್ರಿಸ್ ಧಿಅಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಟ್ರಸ್ ಜತೆ ಮುಖಾಮುಖಿ ಸಭೆ ನಂತರ ಅವರು ತಮ್ಮ ಖಾತೆಗೆ ರಾಜೀನಾಮೆ ನೀಡಿದ್ದಾರೆ.

ಸುಯೆಲ್ಲಾ ಬ್ರಾವರ್‍ಮನ್ ದಿಢೀರ್ ರಾಜೀನಾಮೆ ಘೋಷಿಸಿರುವುದು ದೊಡ್ಡ ಆಘಾತ ನೀಡಿದೆ. ಅವರು ಪ್ರಧಾನಿ ಗುರಿಯಾಗಿಸಿಕೊಂಡಿರುವುದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಸರ್ಕಾರದ ಮುಖ್ಯ ಸಚೇತಕ ವೆಂಡಿ ಮಾರ್ಟನ್ ಅವರು ಉಪನಾಯಕ ಕ್ರೇಗ್ ವಿಟ್ಟೆಕರ್ ಅವರೊಂದಿಗೆ ರಾಜೀನಾಮೆ ನೀಡಿದ್ದಾರೆ.

36 ಸಾವಿರ ವಿದ್ಯಾರ್ಥಿಗಳಿಗೆ ಸ್ಕೂಟರ್ ಗಿಫ್ಟ್

ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಮಾರ್ಟನ್ ಅವರ ಜವಾಬ್ದಾರಿ. 2015 ರಿಂದ ವೆಸ್ಟ್ ಮಿಡ್‍ಲ್ಯಾಂಡ್‍ನಲ್ಲಿ ಆಲ್ಟ್ರಿಡ್ಜ್ ಬ್ರೌನ್‍ವಿಜ್‍ನ ಸಂಸದರಾಗಿದ್ದ ಮಾರ್ಟನ್ ಅವರನ್ನು ಆರು ವಾರಗಳ ಹಿಂದೆಯಷ್ಟೆ ಆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಈಗ ಅವರು ರಾಜೀನಾಮೆ ನೀಡಿದ್ದಾರೆ.

ಈ ಹಿಂದಿನ ಅರ್ಥ ಸಚಿವ ಕ್ವಾಸಿ ಕ್ವಾರ್ಟಿನ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರಿಮೆ ಹಂಟ್ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲು ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿದ್ದಾರೆ. ಇದು ಟ್ರಸ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಎಂದು ಹೇಳಲಾಗಿದೆ.

Articles You Might Like

Share This Article