ವಿಶ್ವಾಸಮತ ಗೆದ್ದ ಬ್ರಿಟನ್ ಪ್ರಧಾನಿ ಬೋರಿಸ್

Spread the love

ಲಂಡನ್, ಜೂ.7- ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿಶ್ವಾಸಮತ ಯಾಚನೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಜಯಗಳಿಸಿದ್ದು, ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಆದರೆ ವಿಶ್ವಾಸ ಮತಯಾಚನೆಯ ವೇಳೆ ಅವರ ಪಕ್ಷದ ಒಳ ಬಂಡಾಯ ಬಯಲಿಗೆ ಬಂದಿದೆ.

359 ಸಂಸದರ ಸಂಖ್ಯಾಬಲದ ಕನ್ಸರ್ವೆಟಿವ್ ಪಕ್ಷದ ಶಾಸಕಾಂಗ ನಾಯಕತ್ವಕ್ಕಾಗಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಬೋರಿಸನ್ 211 ಮತಗಳನ್ನು ಪಡೆದಿದ್ದಾರೆ. 148 ಮಂದಿ ಅವಿಶ್ವಾಸ ಹೊಂದಿರುವುದಾಗಿ ಮತ ಚಲಾಯಿಸಿದ್ದಾರೆ. 63 ಮತಗಳ ಅಂತರದಿಂದ ವಿಶ್ವಾಸಮತದಿಂದ ಬೋರಿಸನ್ ಜಯ ಸಾಧಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕನ್ಸರ್ವೆಟಿವ್ ಪಕ್ಷದಲ್ಲಿ ಒಳಜಗಳವನ್ನು ಬಹಿರಂಗ ಮಾಡಿದೆ. ಮುಂದಿನ ದಿನಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಆ ವೇಳೆ ಜನ ಕನ್ಸರ್ವೆಟಿವ್ ಅರ್ಥಾತ್ ಟೋರಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಿಸದೆ ಹೋದರೆ ಆಗ ಮತ್ತೆ ನಾಯಕತ್ವದ ವಿವಾದ ತಲೆ ಎತ್ತಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳಿವೆ.

ಪ್ರಸ್ತುತ ಶೇ.58.8ರಷ್ಟು ಮತಗಳನ್ನು ಪಡೆದಿರುವ ಬೋರಿಸನ್, ತಮ್ಮ ವಿರೋಧ ಇರುವ ಶೇ.41.2ರಷ್ಟು ಸಂಸದರನ್ನು ಪರಿಣಿಸುವ ಅನಿವಾರ್ಯತೆ ಎದುದಾಗಿದೆ. ಈ ಬೆಳವಣಿಗೆ ಪ್ರಧಾನಿ ಅವರ ದೀರ್ಘಾವ ನಾಯಕತ್ವಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೋರಿಸನ್, ರಾಜಕೀಯಕ್ಕೆ ಮತ್ತು ದೇಶಕ್ಕೆ ಇದು ಉತ್ತಮ ಫಲಿತಾಂಶವಾಗಿದೆ. ಎಲ್ಲರ ಮನ ಒಪ್ಪುವ ಫಲಿತಾಂಶವನ್ನು ಸಂಸದರು ನೀಡಿದ್ದಾರೆ. ಜನರಿಗಾಗಿ ನಮ್ಮ ಸರ್ಕಾರ ಏನನ್ನಾದರೂ ಮಾಡಬಹುದು ಎಂಬ ನಿರೀಕ್ಷೆಗಳನ್ನು ಹೆಚ್ಚಿಸಿದೆ ಎಂದಿದ್ದಾರೆ. ಸದ್ಯಕ್ಕೆ ಪಕ್ಷದ ನಾಯಕತ್ವ ಮತ್ತು ಪ್ರಧಾನಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಜಾನ್ಸನ್ ಯಶಸ್ವಿಯಾಗಿದ್ದಾರೆ.

Facebook Comments