ಬ್ರಿಟನ್, ಡಿ.11- ಪಾಕಿಸ್ತಾನದಲ್ಲಿ ಹಿಂದುಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಹುಡುಗಿಯರನ್ನು ಬಲವಂತವಾಗಿ ಮತಾಂತರಗೊಳಿಸಿ ವಿವಾಹವಾಗುತ್ತಿರುವ ಆರೋಪದಲ್ಲಿ ಮೌಲಾನ ಸೇರಿದಂತೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅನೇಕ ಭ್ರಷ್ಟಾ ಅಧಿಕಾರಿಗಳು ಮತ್ತು ಸಂಘಟನೆಗಳನ್ನು ಬ್ರಿಟೀಷ್ ಸರ್ಕಾರ ನಿಷೇಧಿಸಿದೆ.
ಅಂತರ್‍ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಮತ್ತು ಮಾನವ ಹಕ್ಕುಗಳ ದಿನದ ಸಂದರ್ಭದಲ್ಲಿ ಬ್ರಿಟನ್ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಒಟ್ಟು 30 ವ್ಯಕ್ತಿಗಳು ಅಧಿಕಾರಿಗಳು ಮತ್ತು ಸಂಸ್ಥೆಗಳನ್ನು ನಿಷೇಧ ಮಾಡಿದೆ.
ವಿದೇಶಾಂಗ ಸಚಿವ ಕ್ಲಿವರ್ಲಿ ನಿಷೇಧಿತ ವ್ಯಕ್ತಿ ಮತ್ತು ಸಂಘಟನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಸಿಂದ್ ಪ್ರಾಂತ್ಯದ ಗೋಷ್ಠಿಯಲ್ಲಿರುವ ದರ್ಗಾದ ವಿಯ್ಯಾನ್ ಅಬ್ದುಲ್ ಹಕ್ ಅವರ ಹೆಸರು ಕೂಡ ಸೇರಿದೆ. ಖೈದಿಗಳನ್ನು ಹಿಂಸಿಸುವುದು ಮಹಿಳೆಯರ ಅತ್ಯಾಚಾರ ವ್ಯವಸ್ಥಿತ ಚಿತ್ರಹಿಂಸೆಗಳಲ್ಲಿ
ತೊಡಗಿಸಿಕೊಂಡ ಕೆಲ ನಾಯಕರ ಹೆಸರು ಕೂಡ ಪಟ್ಟಿಯಲ್ಲಿದೆ.
ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM
ಜಗತ್ತಿನಾದ್ಯಂತ ಮುಕ್ತ ಸಮಾಜವನ್ನು ಉತ್ತೇಜಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಬ್ರಿಟನ್ ಹೇಳಿದೆ. ಮೂಲಭೂತ ಹಕ್ಕುಗಳ ಉಲ್ಲಂಘಟನೆ ಮಾಡಿರುವುದನ್ನು ನಾವು ನಿಬರ್ಂಧಿಸುತ್ತೇವೆ. ಭಯದ ಮೇಲೆ ಸ್ವಾತಂತ್ರ್ಯದ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಮ್ಮ ಇತ್ಯಾರ್ಥದಲ್ಲಿರುವ ಎಲ್ಲಾ ವಿಧಾನಗಳನ್ನು ನಾವು ಬಳಸಲು ನಿರ್ಧರಿಸಿದ್ದೇವೆ.
ಪಾಕಿಸ್ತಾನದ ಹಕ್ ಪ್ರಭಾವ ಶಾಲಿಯಾಗಿದ್ದು, ಈ ಪ್ರಾಂತ್ಯದ ಬಹುತೇಕ ಹಿಂದುಗಳನ್ನು ಅವರು ಬಲವಂತವಾಗಿ ಮತಾಂತರ ಮಾಡಿದ್ದಕ್ಕೆ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಅಪ್ರಾಪ್ತರ ಬಲವಂತದ ಮದುವೆಗಳು ಮತ್ತು ಮತಾಂತರಗಳಿಗೆ ಕಾರಣರಾಗಿದ್ದಾರೆ ಎಂದು ಬ್ರಿಟನ್ ಉಲ್ಲೇಖಿಸಿದೆ.
ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ : ಆಸ್ಪತ್ರೆಗೆ ಸ್ಥಳಾಂತರಿಸಿದ ಪೊಲೀಸರು
ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡವರ ಆಸ್ತಿಯನ್ನು ಬ್ರಿಟನ್‍ನಲ್ಲಿ ಮುಟ್ಟುಗೋಲು ಹಾಕಿಕೊಳ್ಳುವುದು ಅವರ ಪ್ರಯಾಣ ನಿಷೇಧ ಹಾಗೂ ಯಾವುದೇ ಬ್ರಿಟನ್ ಕಂಪೆನಿ ಹಾಗೂ ಸಂಸ್ಥೆಯೊಂದಿಗೆ ವ್ಯಾಪಾರ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ರಷ್ಯಾ, ಉಗಾಂಡ, ಮ್ಯಾನ್‍ಮಾರ್ಕ್ ಮತ್ತು ಇರಾನ್ ನ ಜನರು ಸಹ ಈ ನಿಬರ್ಂಧಗಳಲ್ಲಿ ಸೇರಿದ್ದಾರೆ.
UK, sanctions, Pak, ‘ringleader’ forced, Hindu, conversions,