2ನೇ ದಿನವೂ ಉಕ್ರೇನ್ ಮೇಲೆ ರಷ್ಯಾ ದಾಳಿ, 137ಕ್ಕೂ ಹೆಚ್ಚು ಮಂದಿ ಬಲಿ..!

Social Share

ಕೀವ್, ಫೆ.25- ರಷ್ಯಾ ಆಕ್ರಮಣದಿಂದ ಉಕ್ರೇನ್ ಜರ್ಝರಿತವಾಗಿದ್ದು, ಎರಡನೆ ದಿನವೂ ದಾಳಿ, ಪ್ರತಿದಾಳಿ ಮುಂದುವರೆದಿವೆ. ಹೊಸದಾಗಿ ಜನವಸತಿ ಪ್ರದೇಶದ ಮೇಲೂ ಬಾಂಬ್ ದಾಳಿಯಾಗಿದೆ. ಜನ ಭಯಬೀತರಾಗಿ ಮೆಟ್ರೋ ನಿಲ್ದಾಣಗಳ ನೆಲ ಮಹಡಿಗಳಲ್ಲಿ ಅಡಗಿ ಕುಳಿತಿದ್ದಾರೆ.
ಹಲವು ನಗರಗಳು ಹಾಗೂ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿ ಮುಂದುವರೆದಿದ್ದು, ಮೂರು ಕಡೆಯಿಂದ ರಷ್ಯಾ ಸೇನಾಪಡೆಗಳು ಮತ್ತು ಟ್ಯಾಂಕರ್‍ಗಳು ದಾಳಿ ನಡೆಸುತ್ತಿರುವುದರಿಂದ ಪುಟ್ಟ ದೇಶ ಉಕ್ರೇನ್ ನಲುಗಿ ಹೋಗಿದೆ. ಈ ವರೆಗೂ ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸೇರಿ 137ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಕೂಡ ಹಲವು ಪ್ರದೇಶಗಳಲ್ಲಿ ಸ್ಫೋಟದ ಸದ್ದುಗಳು ಕೇಳಿ ಬಂದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.
ಶುಕ್ರವಾರ ರಾಜಧಾನಿ ಕೀವ್ ನ ಹೊರವಲಯದಲ್ಲಿ ಆಕ್ರಮಣ ತೀವ್ರಗೊಂಡಿದೆ. ಜಾಗತಿಕ ಶೀತಲ ಸಮರ ಭದ್ರತೆಯ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪಾಶ್ಚಿಮಾತ್ಯ ನಾಯಕರು ತುರ್ತು ಸಭೆ ನಿಗದಿಪಡಿಸಿದ್ದಾರೆ. ಉಕ್ರೇನ್ ಅಧ್ಯಕ್ಷರು ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಈ ನಡುವೆಯೂ ಬೆಳಗಾಗುವ ಮೊದಲು ಕೈವ್ ನಲ್ಲಿ ಸ್ಫೋಟಗಳು ಸದ್ದು ಮಾಡಿವೆ. ದಿನದ ಹೋರಾಟದಲ್ಲಿ ಆದರೆ 100 ಕ್ಕೂ ಹೆಚ್ಚು ನಾಗರೀಕರು ಸಾವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೈವ್ ನಲ್ಲಿ ರಷ್ಯಾದ ಪಡೆಗಳ ದಾಳಿಯಲ್ಲಿ ಹಲವು ಸ್ಫೋಟಗಳು ಕೇಳಿ ಬಂದಿವೆ ಎಂದು ವರದಿಯಾಗಿದೆ. ಉಕ್ರೇನ್ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದ ನಿಯಂತ್ರಣವನ್ನು ಕಳೆದುಕೊಂಡಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ವಿಧ್ವಂಸಕ ಗುಂಪುಗಳು ನಗರದ ಮೇಲೆ ಅತಿಕ್ರಮಣ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ ಎಂದು ಹೇಳಿದ್ದಾರೆ. ಶುಕ್ರವಾರದ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ ಮಾತನಾಡಿರುವ ಅವರು, ಬಲಿದಾನವಾದವರನ್ನು ಹಿರೋಗಳು ಎಂದು ಕರೆದಿದ್ದಾರೆ.
10 ಮಿಲಿಟರಿ ಅಕಾರಿಗಳು ಸೇರಿದಂತೆ 137 ವೀರರು ಕೊಲ್ಲಲ್ಪಟ್ಟಿದ್ದು, 316 ಜನರು ಗಾಯಗೊಂಡಿದ್ದಾರೆ. ಒಡೆಸಾ ಪ್ರದೇಶದ ಝಿಮಿನಿ ದ್ವೀಪದಲ್ಲಿ ಗಡಿ ಕಾವಲುಗಾರರು ಸೇರಿದ್ದಾರೆ, ಆ ಪ್ರದೇಶವನ್ನು ರಷ್ಯನ್ನರು ವಶಪಡಿಸಿಕೊಂಡಿದ್ದಾರೆ. ದೇಶದ ಭವಿಷ್ಯ ನಮ್ಮ ಸೈನ್ಯ, ಭದ್ರತಾ ಪಡೆಗಳು, ರಕ್ಷಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ವಿಶ್ವದಲ್ಲಿ ನಾವು ಒಂಟಿಯಾಗಿದ್ದೇವೆ. ಆದರೂ ಎದೆಗುಂದದೆ ನಮ್ಮ ಹೋರಾಟ ಮುಂದುವರೆಸಿದ್ದೇವೆ ಎಂದು ಭಾವನಾತ್ಮಕ ಭಾಷಣ ಮಾಡಿದ್ದಾರೆ.
ರಷ್ಯಾ ದುಷ್ಟ ಮಾರ್ಗವನ್ನು ಪ್ರಾರಂಭಿಸಿದೆ, ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಮತ್ತು ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ ಎಂದು ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ. ಉಕ್ರೇನ್‍ನ ಸೇನಾ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುವುದಾಗಿ ರಷ್ಯಾ ಹೇಳಿತ್ತು. ಆದರೆ ದಾಳಿ ಜನವಸತಿ ಪ್ರದೇಶದ ಮೇಲೂ ದಾಳಿ ನಡೆಸಲಾಗಿದೆ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.
ರಷ್ಯಾ ಜನರನ್ನು ಕೊಲ್ಲುತ್ತಿದೆ. ಶಾಂತಿಯುತ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಈ ನಡುವೆ ರಷ್ಯಾದ ಆಕ್ರಮಣವನ್ನು ಎದುರಿಸಲು ಉಕ್ರೇನ್ ನ ಸಂಪೂರ್ಣ ಸೇನಾಶಕ್ತಿಯನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ಗುರುವಾರ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಸೇನಾ ಸನ್ನದು ಮುಂದಿನ 90 ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಅರ್ಹ ಜನರು ಸೇನೆಗೆ ಸೇರಿ ಸಂಕಷ್ಟ ಕಾಲದಲ್ಲಿ ತಾಯ್ನಾಡ ರಕ್ಷಣೆಗೆ ಶ್ರಮಿಸುವಂತೆ ಕರೆ ನೀಡಿದ್ದು, ಸೇನಾ ಚಟುವಟಿಕೆಗಳಿಗೆ ಅಗತ್ಯ ಹಣಕಾಸಿನ ನೆರವು ನೀಡುವ ಹೊಣೆಗಾರಿಕೆಯನ್ನು ಸಂಪುಟಕ್ಕೆ ವಹಿಸಿದ್ದಾರೆ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರದು ಲಜ್ಜೆಗೆಟ್ಟ ಪ್ರಯತ್ನ ಎಂದು ಟೀಕಿಸಿದ್ದಾರೆ.
ಉಕ್ರೇನ್ ಸರ್ಕಾರವನ್ನು ಕೆಡವಲು ಮತ್ತು ತನ್ನದೇ ಆಡಳಿತವನ್ನು ಸ್ಥಾಪಿಸಲು ರಷ್ಯ ಪ್ರಯತ್ನಿಸುತ್ತಿದೆ ಎಂದು ಬೆಲಾರಸ್ ನಿಂದ ಜನಪ್ರತಿನಿಯೊಬ್ಬರು ಅಮೆರಿಕಾದ ಕಾರ್ಯದರ್ಶಿ ಅವರಿಗೆ ಕರೆ ಮಾಡಿ ಹೇಳಿದ್ದಾರೆ. ರಷ್ಯಾದ ಯಾಂತ್ರಿಕೃತ ಪಡೆಗಳು ರಾಜಧಾನಿ ಕೈವ್ ನಿಂದ ಸುಮಾರು 20 ಮೈಲುಗಳಷ್ಟು ದೂರದಲ್ಲಿದೆ. ಯಾವ ಕ್ಷಣದಲ್ಲಾದರೂ ರಾಜಧಾನಿಯ ಮೇಲೆ ಅತಿಕ್ರಮಣ ನಡೆಯಬಹುದು ಎಂದು ಹೇಳಿದ್ದಾರೆ.

Articles You Might Like

Share This Article