ಚಿಕ್ಕಬಳ್ಳಾಪುರ, ಮಾ 4- ರಷ್ಯಾ ಮತ್ತು ಉಕ್ರೇನ್ ನಡುವೆ ಕಣ್ಣಿನ ಎದುರಿಗೆ ನಡೆಯುತಿದ್ದ ಭಯಾನಕ ಯುದ್ದದ ಸ್ಥಿತಿಯನ್ನು ನಗರದ ವಿದ್ಯಾರ್ಥಿನಿ ಲಿಖಿತ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ, ತಾನು ಉಕ್ರೇನ್ ಒಡೇಶಾ ನಗರದಲ್ಲಿ ವಾಸುತಿದ್ದ ಸ್ಥಳದ ಸಮೀಪವೆ ನಿರಂತರ ಬಾಂಬ್ ದಾಳಿಯ ಪರಿಣಾಮ ಬಾರಿ ಶಬ್ದ ಕಿವಿಗೆ ಅಪ್ಪಳಿ ಪ್ರಾಣ ಭೀತಿ ಉಂಟು ಮಾಡಿತಲ್ಲದೇ ನಾನು ಬದುಕುವೆನೋ ಇಲ್ಲವೋ ಎಂಬ ಆತಂಕದಿಂದ ನಡುಗಿಹೊಗಿದ್ದೆ ಹಿರಿಯರ ಆಶೀರ್ವಾದ ಹಾಗೂ ನನ್ನ ಪುಣ್ಯದಿಂದ ಬದುಕಿ ಬಂದಿದ್ದೇನೆ ಎಂದು ಅಲ್ಲಿ ನಡೆದ ಭಯಾನಕ ಘಟನೆಯನ್ನು ಮನಕಲಕುವ ರೀತಿ ಹೇಳಿದ್ದಾರೆ.
ಉಕ್ರೇನ್ ನ ಒಡೇಶಾದಲ್ಲಿ 4 ನೇ ವರ್ಷದ ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಸಾಂಗ ಮಾಡುತಿರುವ ಈ ವಿದ್ಯಾರ್ಥಿನಿ ಲಿಖಿತ ಅಲ್ಲಿ ಅನುಭವಿಸಿ ಬಂದ ತನ್ನ ಯಾತನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟು ಹಂಚಿಕೊಂಡಿದ್ದಾರೆ.
ನಗರದ ಹೊರಹೊಲಯ ಅಣಕನೂರು ಸಮೀಪದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ತನ್ನ ತಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುನಿರತ್ನಂ ಅವರೊಂದಿಗೆ ಆಗಮಿಸಿ ತನ್ನ ನೋವನ್ನು ತೊಡಕೊಂಡ ಈಕೆ ನಾಲ್ಕು ದಿನಗಳ ಕಾಲ ಯುದ್ದದ ಅವಧಿಯಲ್ಲಿ ನಾನು ಬಹಳಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಕ್ಷಣ ಕ್ಣಣಕ್ಕೂ ಬಾಂಬ್ ದಾಳಿ ನಡೆಯುತಿದ್ದು ಉಕ್ರೇನ್ ದೇಶದ ವಡೇಶಾ ದಲ್ಲಿ ಯಾವ ಸಂದರ್ಭದಲ್ಲಿ ಪ್ರಾಣ ಕಳೆದುಕೊಳ್ಳುವೆವೊ ಎಂಭ ಭೀತಿ ಕಾಡಿದ್ದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಿ ಪಾರಾಗಿ ಬಂದೆವು ಎಂದರು.
ಅಲ್ಲಿ ಉಳಿದಿರುವ ಭಾರತೀಯ ವಿದ್ಯಾರ್ಥಿಗಳನ್ನು ಸಂರಕ್ಷಣೆ ಮಾಡುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ ಅಲ್ಲಿನ ಭಾರತೀಯ ವಿದ್ಯಾರ್ಥಿಗಳ ಸ್ಥಿತಿಗತಿಗಳ ವಿಷಯವೇ ಬೇರೆ ಇಲ್ಲಿನ ಮಾದ್ಯಮಗಳು ಭಿತ್ತರಿಸುತಿರುವ ಸ್ಥಿತಿಗತಿಯೇ ಬೇರೆ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾರೆ.
