ಕಿವ್ (ಉಕ್ರೇನ್), ಫೆ.24- ದೇಶದ ಪ್ರತಿಯೊಬ್ಬರು ಶಾಂತವಾಗಿರಿ, ಸಾಧ್ಯವಾದರೆ ಇಂದು ಮನೆಯಲ್ಲೇ ಇರಿ, ನಾವು ಕೆಲಸ ಮಾಡುತ್ತಿದ್ದೇವೆ. ಸೇನೆ ಸಕ್ರಿಯವಾಗಿದೆ, ರಕ್ಷಣೆ ಹಾಗೂ ಭದ್ರಾತಾ ವಿಭಾಗಗಳು ಚಟುವಟಿಕೆಯಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲ್ಡೊಮೈರ್ ಝೆಲೆಕ್ಸಿ ತನ್ನ ದೇಶದ ಜನರಿಗೆ ಭರವಸೆ ನೀಡಿದ್ದಾರೆ.
ಸಂಕ್ರಿಪ್ತ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ರಷ್ಯಾ ವಿಶೇಷ ಮಿಲಿಟರಿ ಕಾರ್ಯಾರಣೆಯನ್ನು ಡಾನ್‍ಬಾಸ್ ಪ್ರಾಂತ್ಯದಲ್ಲಿ ನಡೆಸಿದೆ. ಜೊತೆ ನಮ್ಮ ಮಿಲಿಟರಿಯ ಮೂಲ ಸೌಲಭ್ಯ ಹಾಗೂ ಸಿಬ್ಬಂದಿಗಳ ಮೇಲೆ ದಾಳಿಯಾಗಿದೆ. ದೇಶದಲ್ಲಿ ಸಮರ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ಸೇರಿದಂತೆ ಜಾಗತಿಕ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಕ್ರೋಢಿಕರಣ ಮಾಡುತ್ತಿದ್ದೇವೆ ಎಂದಿದ್ದಾರೆ.
ದೇಶದ ಜನರು ಭಯ ಬೀಳುವ ಅಗತ್ಯ ಇಲ್ಲ, ಶಾಂತವಾಗಿರಿ ಮನೆಯಲ್ಲೇ ಇರಿ ಎಂದಿದ್ದಾರೆ. ವಿದೇಶಾಂಗ ಸಚಿವರು ಹೇಳಿಕೆ ನೀಡಿದ್ದು, ರಷ್ಯಾ ಮಿಲಿಟರಿ ಕಾರ್ಯಾಚರಣೆ ಉಕ್ರೇನ್ ಅನ್ನು ನಾಶ ಮಾಡುವ ದುರುದ್ದೇಶಹೊಂದಿದೆ. ಉಕ್ರೇನ್ ಅನ್ನು ಜಪ್ತಿ ಮಾಡಿ ತನ್ನ ವಶದಲ್ಲಿ ಇಟ್ಟುಕೊಳ್ಳುವ ಪ್ರಯತ್ನಗಳಾಗಿವೆ.
ರಷ್ಯಾ ಹಲವು ದಿಕ್ಕುಗಳಿಂದಲೂ ದಾಳಿ ನಡೆಸಿದೆ. ಇದು ಯುದ್ಧದ ಕ್ರಿಯೆಯಾಗಿದೆ. ನಮ್ಮ ದೇಶದ ಸೌರ್ವಭೌಮತೆ ಹಾಗೂ ಸಮಗ್ರತೆಯ ಮೇಲಿನ ದಾಳಿಯಾಗಿದ್ದು, ವಿಶ್ವಸಂಸ್ಥೆಯ ಗುಣಾತ್ಮಕ ಮೂಲಭೂತ ನಿಯಮಗಳು ಹಾಗೂ ಅಂತರ ರಾಷ್ಟ್ರೀಯ ಕಾನೂನುಗಳ ಉಲ್ಲಂಘಟನೆಯಾಗಿದೆ.
ಅಂತರ ರಾಷ್ಟ್ರೀಯ ಕಾನೂನಿನ ಪ್ರಕಾರ ಉಕ್ರೇನ್ ಸ್ವಯಂ ರಕ್ಷಣೆಗೆ ಸಕ್ರಿಯವಾಗಲು ಅವಕಾಶ ಇದೆ. ಅಂತರ ರಾಷ್ಟ್ರೀಯ ಸಮುದಾಯ ಕೂಡ ತಕ್ಷಣವೇ ಕ್ರಮ ಜರುಗಿಸಬೇಕು. ನಮ್ಮ ಒಗ್ಗಟ್ಟು ಹಾಗು ಕಠಿಣ ಹೆಜ್ಜೆಗಳು ಮಾತ್ರ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ನಿಲ್ಲಿಸಲು ಸಾಧ್ಯ ಎಂದು ಹೇಳಿದ್ದಾರೆ.
ನಮಗೂ ಪ್ರತಿರೋಧ ಗೊತ್ತಿದೆ, ಹೋರಾಡುತ್ತೇವೆ. ರಷ್ಯಾದೊಂದಿಗಿನ ಯುದ್ಧದಲ್ಲಿ ಉಕ್ರೇನ್ ಗೆಲವು ಸಾಧಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
