ಜಿನೀವಾ ಮಾ.3- ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಆರೇ ದಿನಗಳಲ್ಲಿ ಒಂದು ಮಿಲಿಯನ್ (10 ಲಕ್ಷ) ಜನರು ಉಕ್ರೇನ್ ದೇಶವನ್ನು ತೊರೆದಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ವರದಿಮಾಡಿದ್ದು, ಇದು ಈ ಶತಮಾನದ ಅತೀ ದೊಡ್ಡ ವಲಸೆಯಾಗಿದೆ ಎಂದು ತಿಳಿಸಿದೆ.
ವಿಶ್ವ ಬ್ಯಾಂಕ್ ಎಣಿಕೆ 2020ರ ಪ್ರಕಾರ 44 ಮಿಲಿಯನ್ ಜನಸಂಖ್ಯೆಯಲ್ಲಿ 2%ಕ್ಕಿಂತ ಹೆಚ್ಚು ಜನ ಪಲಾಯನ ಮಾಡುತ್ತಿದ್ದು, ಸುಮಾರು 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ತೊರೆಯಬಹುದು ಯುಎನ್ ಹೈ ಕಮಿಷನರ್ ಭವಿಷ್ಯ ನುಡಿದಿದೆ.
ಕೇವಲ ಏಳು ದಿನಗಳಲ್ಲಿ ನಾವು ಉಕ್ರೇನ್‍ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗುವುದನ್ನು ನೋಡಿದ್ದೇವೆ ಎಂದು ಯುಎನ್ ಹೈ ಕಮಿಷನರ್ ಫಿಲಿಪ್ಪೋ ಗ್ರಾಂಡಿ ಟ್ವೀಟ್ ಮಾಡಿದ್ದಾರೆ.
ಗುಂಡು, ಸೋಟದ ಮಾರ್ಟರ್ ಶೆಲ್‍ಗಳು ಮತ್ತು ಗುಂಡೇಟುಗಳು ದೇಶದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ಉಕ್ರೇನಿಯನ್ನರು ಹತಾಶೆಗೊಂಡು ವಲಸೆ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಯುಎನ್ ಎಚ್‍ಸಿಆರ್ ಡೇಟಾ ಪ್ರಕಾರ, ಪೋಲೆಂಡ್‍ಗೆ 505,000ಕ್ಕಿಂತ ಹೆಚ್ಚು, ಹಂಗೇರಿಗೆ 116,000 ಮೊಲ್ಡೊವಾ 79,000 ಮತ್ತು ಸ್ಲೋವಾಕಿಯಾಕ್ಕೆ 71,200 ಕ್ಕಿಂತ ಹೆಚ್ಚು ಜನ ಪಲಾಯನ ಮಾಡಿದ್ದಾರೆ ಎಂದು ಹೇಳಿದೆ.
