ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಸಜ್ಜಾದ ರಷ್ಯಾ ಪಡೆ

Social Share

ಕೀವ್, ಡಿ.16- ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ಮತ್ತೆ ದಾಳಿ ಮಾಡಲು ರಷ್ಯಾ 200,000 ಹೊಸ ಪಡೆಗಳನ್ನು ಸಿದ್ಧಪಡಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಕೀವ್ ನಗರದ ಮೇಲೆ ದಾಳಿ ನಡೆಸಲು ರಷ್ಯನ್ನರು ಎರಡು ಲಕ್ಷ ಹೊಸ ಪಡೆಗಳನ್ನು ಸಿದ್ದಪಡಿಸಿದ್ದಾರೆ ಎಂದು ಉಕ್ರೇನ್ ಸೇನೆಯ ಜನರಲ್ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಜನರಲ್ ವ್ಯಾಲೆರಿ ಜಲುಜ್ನಿ ಅವರು ರಷ್ಯ ಸೇನೆ ಕೀವ್ ನಗರವನ್ನು ವಶಕ್ಕೆ ಪಡೆದುಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದು ಈ ತೀರ್ಮಾನ ಕೈಗೊಂಡಿದೆ ಎಂದು ವಿವರಿಸಿದ್ದಾರೆ.

ಫೆಬ್ರವರಿ ಅಂತ್ಯದೊಳಗೆ ಕೀವ್ ನಗರವನ್ನು ವಶಪಡಿಸಿಕೊಳ್ಳಲು ರಷ್ಯ ತೀರ್ಮಾನಿಸಿದೆ ಆದರೆ, ನಾವು ಎದುರಾಳಿಗಳನ್ನು ಯಾವ ರೀತಿ ಎದುರಿಸಬೇಕು ಎಂದು ನಮಗೆ ಅಗತ್ಯವಿರುವ ಮದ್ದುಗುಂಡುಗಳೇಷ್ಟು ಎಂಬ ಲೆಕ್ಕ ಹಾಕಿಕೊಂಡಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.

ಸಚಿವಾಲಯ ಹಾಗೂ ಇಲಾಖೆಗಳ ಕ್ಯಾಲೆಂಡರ್‌ ಮುದ್ರಣ ನಿಷೇಧ ತೆರವು

ಆರಂಭದದಲ್ಲಿ ಕೀವ್ ನಗರವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ರಷ್ಯನ್ ಸೇನೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ನಾವು ರಾಜಧಾನಿಯನ್ನು ಕಾಪಾಡಿಕೊಳ್ಳಲು ಯಶಸ್ವಿಯಾದೇವು ಆದರೂ ರಷ್ಯನ್ನರು ಕೀವ್ ನಗರವನ್ನು ವಶಪಡಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದೆ ಎಂದು ಅವರು ಆರೋಪಿಸಿದರು.

ರಷ್ಯ ಸೇನೆಗೆ ತನ್ನ ಸೋಲನ್ನು ಕರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿದ್ದಾರೆ. ಇದರ ಪರಿಣಾಮ ನಾವು ಎದುರಿಸುತ್ತಿದ್ದೇವೆ. ನಮ್ಮ ದೇಶ ವಿದ್ಯುತ್ ಕ ಡಿತದಿಂದ ಸೊರಗಿ ಹೋಗಿದೆ. ಲಕ್ಷಾಂತರ ಉಕ್ರೇನಿಯರು ಚಳಿ ಮತ್ತು ಕತ್ತಲೆಯಲ್ಲೇ ಜೀವನ ಸಾಗಿಸುವಂತಾಗಿದೆ ಎಂದು ಅವರು ದೂರಿದರು.

ಕತ್ತು ಕೊಯ್ದ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಪತ್ತೆ

ರಷ್ಯದವರು ಏನೇ ಕಸರತ್ತು ನಡೆಸಿದರು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಅವರ ತಂತ್ರಕ್ಕೆ ನಾವು ಪ್ರತಿತಂತ್ರ ಹೆಣೆಯುತ್ತೇವೆ ಆದರೆ, ನಮಗೆ ಅಗತ್ಯ ಸಂಪನ್ಮೂಲಗಳು ಬೇಕು ಎಂದು ಅವರು ಅಭಿಪ್ರಾಯಪಟ್ಟರು.

Ukraine, Russia, Preparing, Fresh Troops, Attack, Kyiv,

Articles You Might Like

Share This Article