ವಾಷಿಂಗ್ಟನ್,ಮಾ.8- ಯುದ್ಧದಿಂದ ಸಂಕಷ್ಟಕ್ಕೀಡಾಗಿರುವ ಉಕ್ರೇನ್‍ಗೆ ವಿಶ್ವಬ್ಯಾಂಕ್ ನೆರವು ನೀಡಲು ಮುಂದಾಗಿದ್ದು, 723 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.
ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್‍ಗೆ ಬೆಂಬಲದ ರೂಪವಾಗಿ ಪೂರಕ ಬಜೆಟ್‍ಗೆ ವಿಶ್ವಬ್ಯಾಂಕ್‍ನ ಕಾರ್ಯ ನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿರುವ ಬಗ್ಗೆ ವಿಶ್ವಬ್ಯಾಂಕ್‍ನ ವೆಬ್‍ಸೈಟ್‍ನಲ್ಲಿ ಅಕೃತ ಹೇಳಿಕೆ ಬಿಡುಗಡೆ ಮಾಡಿದೆ.
Russia-Ukraine war : ಝಲೆನ್‍ಸ್ಕಿ ಹತ್ಯೆಗೆ ಸ್ಕೆಚ್
723 ಮಿಲಿಯನ್ ಡಾಲರ್‍ಗಳ ಆರ್ಥಿಕ ನೆರವಿನಲ್ಲಿ 350 ಮಿಲಿಯನ್ ಪೂರಕ ಸಾಲವು ಒಳಗೊಂಡಿರುತ್ತದೆ. ಈ ನೆರವು ಯುದ್ಧದಲ್ಲಿ ಸಿಲುಕಿರುವ ಉಕ್ರೇನ್ ಜನರಿಗೆ ಪರಿಹಾರ ಕಲ್ಪಿಸಲು , ಆರೋಗ್ಯ ಕಾರ್ಯಕರ್ತರಿಗೆ ವೇತನ ಬಿಡುಗಡೆ ಮಾಡಲು ಮತ್ತು ವಯಸ್ಸಾದವರಿಗೆ ಪಿಂಚಣಿ ನೀಡುವುದು ಹಾಗೂ ಸಾಮಾಜಿಕ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
