ಕ್ಯಿವ್, ಫೆ.26- ರಷ್ಯಾ ದಾಳಿಯಿಂದ ಉಕ್ರೇನ್ನಸಲ್ಲಿ ಮೂರು ಮಕ್ಕಳು ಸೇರಿ 198 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ನ ಆರೋಗ್ಯ ಸಚಿವ ವಿಕ್ಟೋರ್ ಲ್ಯಾಸ್ಕೋ ತಿಳಿಸಿದ್ದಾರೆ. ಯುದ್ಧ ಸನ್ನಿವೇಶದಲ್ಲಿ 33 ಮಕ್ಕಳು ಸೇರಿ 1,115ಮಂದಿ ಗಾಯಗೊಂಡಿದ್ದಾರೆ.
ಗುರುವಾರದಿಂದ ರಷ್ಯಾ ಆಕ್ರಮಣ ತೀವ್ರವಾಗಿದ್ದು, ಸಾವುನೋವುಗಳ ಸಂಖ್ಯೆ ಹೆಚ್ಚಾಗಿದೆ. ಕ್ಯಿವ್ ನ ಬೀದಿಯಲ್ಲಿ ನಡೆದ ಸಂಘರ್ಷದಲ್ಲಿ ನಿನ್ನೆ ಒಂದೇ ದಿನ ಇಬ್ಬರು ಮಕ್ಕಳು ಸೇರಿ, 35 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಪೂರ್ತಿ ಸೆಲ್ ದಾಳಿ ಮುಂದುವರೆದಿದ್ದು, ದಾಳಿ ಪ್ರತಿದಾಳಿ ವ್ಯಾಪಕವಾಗಿದೆ. ಏತನ್ಮಧ್ಯೆ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಹಾಗೂ ನಾಗರೀಕರ ಕುರಿತು ಮಾಹಿತಿ ಅಧಿಕೃತ ಮಾಹಿತಿ ನೀಡಲಾಗಿಲ್ಲ.
ಇದರ ಜೊತೆ ರಷ್ಯಾ ಸೈನಿಕರು ಉಕ್ರೇನ್ ನಲ್ಲಿ ದರೋಡೆ ಮಾಡುತ್ತಿದ್ದು, ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದಾರೆ.
