ರಷ್ಯಾ-ಉಕ್ರೇನ್ ಯುದ್ಧ: ಮುಂದುವರೆದ ಭಾರತದ ತಟಸ್ಥ ನಿಲುವು

Social Share

ವಿಶ್ವಸಂಸ್ಥೆ,ಫೆ.24- ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರೆಸಿದೆ.ಉಕ್ರೇನ್‍ನಲ್ಲಿ ಶಾಶ್ವತ ಶಾಂತಿ ನೆಲೆಸುವ ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪರ ಇಲ್ಲವೆ ವಿರುದ್ಧವಾಗಿ ಮತ ಚಲಾಯಿಸದೆ ತನ್ನ ನಿಲುವನ್ನು ಭಾರತ ಮುಂದುವರೆಸಿದೆ.

ಆದರೆ, ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಅಗತ್ಯ ಮಾತುಕತೆ ಮತ್ತು ರಾಜತಾಂತ್ರಿಕ ನಿಲುವುಗಳನ್ನು ಮುಂದುವರೆಸಲು ಅಗತ್ಯ ನೆರವು ನೀಡುವುದಾಗಿ ನವದೆಹಲಿ ಘೋಷಿಸಿದೆ.ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯದ ಪರವಾಗಿ 141 ಮತಗಳನ್ನು ಮತ್ತು ವಿರುದ್ಧವಾಗಿ 7 ಮತಗಳು ಬಿದ್ದರೆ ಭಾರತ ಮತದಾನದಿಂದ ದೂರ ಉಳಿಯುವ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಭಾರತವು ಉಕ್ರೇನ್‍ನ ಕುರಿತ ವಿಶ್ವಸಂಸ್ಥೆ ನಿರ್ಣಯದಿಂದ ಮಾತ್ರ ದೂರವಿದೆ ಆದರೆ, ಅಂತರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದಾಗಿ ಹೇಳಿಕೊಂಡಿದ್ದು, ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ತುರ್ತು ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನವದೆಹಲಿ ಒತ್ತಾಯಿಸಿದೆ.

ಕಳೆದ ಸೆಪ್ಟೆಂಬರ್‍ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ ಈ ಸಂಘರ್ಷದಲ್ಲಿ ಭಾರತವು ಶಾಂತಿ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಬದಿಯಲ್ಲಿದೆ ಎಂದು ಹೇಳಿದ್ದರು.

#UkraineWar, #India, #abstains, #UNvote, #RussianInvasion,

Articles You Might Like

Share This Article