ಶರಣಾಗಲು ಒಪ್ಪದೆ “go F*** yourself’” ಎಂದು ಹೇಳಿದ ಉಕ್ರೇನ್ ಯೋಧರ ಹತ್ಯೆ

Social Share

ಕೀವ್, ಫೆ.25- ಶರಣಾಗಲು ಒಪ್ಪದ ಉಕ್ರೇನ್ ಯೋಧರು “go F*** yourself” ಎಂದು ತಿರುಗೇಟು ನೀಡಿದ್ದರಿಂದ ಸಿಟ್ಟಿಗೆದ್ದ ರಷ್ಯನ್ ಸೈನಿಕರು ಅಮಾನುಶವಾಗಿ ಗುಂಡು ಹಾರಿಸಿ 13 ಮಂದಿಯನ್ನು ಹತ್ಯೆ ಮಾಡಿದ್ದು, ಸ್ನೇಕ್ ಐಲ್ಯಾಂಡ್ತೈಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ನಿಂದದ ಚಿತ್ರ ವಿಚಿತ್ರವಾದ ಸಂಗತಿಗಳು ಬೆಳಕಿಗೆ ಬರುತ್ತಿವೆ. ಉಕ್ರೇನ್ನಮ ಆಗ್ನೇಯ ಭಾಗದ ಕಪ್ಪು ಸಮುದ್ರವನ್ನು ರಕ್ಷಿಸಲು ಸ್ನೇಕ್ಐಮಲ್ಯಾಂಡ್ನೆಲ್ಲಿ ಸಣ್ಣ ಪ್ರಮಾಣದಲ್ಲಿ ಆದರೆ ನಿಫುಣ ಯೋಧರನ್ನು ನಿಯೋಜಿಸಲಾಗಿತ್ತು. ಗುರುವಾರ ರಷ್ಯ ಪಡೆಯ ಯೋಧರು ಎರಡು ಯುದ್ಧ ನೌಕೆಗಳಲ್ಲಿ ದ್ವೀಪದ ಬಳಿ ಬಂದಿದ್ದಾರೆ.
ಉಕ್ರೇನ್ಯೋ್ಧರನ್ನು ಸಂಪರ್ಕಿಸಿರುವ ರಷ್ಯನ್ನರು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದು, ನಿಮ್ಮ ಶಸ್ತ್ರಾಸ್ತ್ರಗಳನ್ನುಕೆಳಗಿಟ್ಟು ಶರಣಾಗಿ. ಇಲ್ಲವಾದರೆ ನಾವು ಗುಂಡು ಹಾರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಲಭ್ಯ ಇರುವ ಧ್ವನಿ ಸಂಗ್ರಹದ ಪ್ರಕಾರ, ನಾವು ರಷ್ಯಾ ಯುದ್ಧ ನೌಕೆಯಲ್ಲಿ ಬಂದಿದ್ದೇವೆ.
ನಾನು ಮತ್ತೆ ಹೇಳುತ್ತಿದ್ದೇನೆ ನಾವು ಯುದ್ಧ ನೌಕೆಯಲ್ಲಿದ್ದೇವೆ. ನಿಮಗೆ ಸಲಹೆ ಮಾಡುವುದೇನೆಂದರೆ ಆಯುಧಗಳನ್ನು ಕೆಳಗಿಡಿ, ಶರಣಾಗಿ. ಇಲ್ಲವಾದರೆ ಗುಂಡು ಹಾರಿಸಬೇಕಾಗುತ್ತದೆ. ನಿಮಗೆ ತಲುಪಿದೆಯೇ ಎಂದು ಕೇಳಿದ್ದಾರೆ.
ಇದಕ್ಕೆ ಉಕ್ರೇನ್ಗಿಡಿ ಭದ್ರತೆಯ ಯೋಧನೊಬ್ಬ ಅವರು ಇಲ್ಲಿಗೆ ಬಂದಿದ್ದಾರೆ. ನಾವು ಅವರಿಗೆ ವಾಪಾಸ್ ಹೋಗಿ ಎಂದು ಹೇಳಬೇಕೆ (go F*** yourself) ಎಂದು ಹೇಳಬೇಕೆ ಎಂದು ಕೇಳಿದ್ದಾನೆ. ಅದಕ್ಕೆ ಸಹವರ್ತಿ ಯೋಧ ಒಂದು ವೇಳೆ ಸಾಧ್ಯವಾದರೆ ಎಂದು ಪ್ರತಿಕ್ರಿಯಿಸಿದ್ದಾನೆ. ನಂತರ ಪಿಸುಧ್ವನಿಯನ್ನು ಬದಲಾವಣೆ ಮಾಡಿಕೊಂಡ ಉಕ್ರೇನ್‍ ಯೋಧ, ಜೋರು ಧ್ವನಿಯಲ್ಲಿ ರಷ್ಯನ್ ಯುದ್ಧ ನೌಕೆ F*** ವಾಪಾಸ್‍ ಹೋಗಿ ಎಂದು ತಿರುಗೇಟು ನೀಡಿದ್ದಾನೆ.
ಇದರಿಂದ ಸಿಟ್ಟಿಗೆದ್ದ ರಷ್ಯನ್ ಯುದ್ಧ ನೌಕೆ 42 ಎಕರೆಯ ದ್ವೀಪದ ಮೇಲೆ ಬಾಂಬುಗಳ ಸುರಿಮಳೆ ಗೈದಿದೆ. ಜೊತೆಗೆ ಗುಂಡಿನ ಸುರಿಮಳೆಯಾಗಿದೆ. ಉಕ್ರೇನ್ ಯೋಧನೊಬ್ಬ ಈ ವೇಳೆ ವಿಡಿಯೋ ಮಾಡಿಕೊಳ್ಳುತ್ತಿದ್ದು, ಆತ ಸೇನೆಯ ಹೆಲ್ಮೆಟ್ ಧರಿಸಿರುವುದು ಕಂಡು ಬರುತ್ತಿದೆ. ಹಿಂದೆ ಗುಂಡಿನ ಸದ್ದು ಕೇಳಿಸುತ್ತಿದೆ. ಇದ್ದಕ್ಕಿದ್ದಂತೆ ಸ್ವಯಂ ವಿಡಿಯೋ ಮಾಡಿಕೊಳ್ಳುತ್ತಿದ್ದ ಉಕ್ರೇನ್‍ ಯೋಧ ನೆಲಕ್ಕುರಿಳಿದ್ದಾನೆ. ಗಡಿಭಾಗದ ಕಾವಲಿಗಿದ್ದ ಎಲ್ಲಾ 13 ಯೋಧರು ಸಾನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷರು. ಹುತಾತ್ಮರನ್ನು ವೀರರು ಎಂದು ಕರೆದಿದ್ದಾರೆ. ಎಲ್ಲರಿಗೂ ಮಣೋತ್ತರ ಶೌರ್ಯ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ. ನಮ್ಮ ಝೀಮಿನಿಯಿ ದ್ವಿಪವನ್ನು ಹೋರಾಟದ ವೇಳೆ ಕಳೆದುಕೊಂಡಿದ್ದೇವೆ. ನಮ್ಮ ಗಡಿಭದ್ರತೆಯ ಯೋಧರು ಹುತಾತ್ಮರಾಗಿದ್ದಾರೆ. ಕೊನೆಯವರಿಗೂ ಅವರ ಸೋಲು ಒಪ್ಪಿಕೊಂಡಿಲ್ಲ. ಅವರ ತ್ಯಾಗವನ್ನು ಉಕ್ರೇನ್‍ ಸ್ಮರಣೀಯವಾಗಿರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ರಷ್ಯನ್ ದಾಳಿಯ ಬಳಿಕ ದ್ವಿಪದೊಂದಿಗಿನ ಸಂಪರ್ಕ ಕಡಿದುಕೊಂಡಿದೆ. ಪ್ರಸ್ತುತ ಈ ದ್ವೀಪ ರಷ್ಯನ್ ಸೇನೆಯ ಹಿಡಿತದಲ್ಲಿದೆ. ಹಲವು ವರ್ಷಗಳಿಂದಲೂ ಈ ದ್ವಿಪದ ಒಡೆತನಕ್ಕಾಗಿ ಉಕ್ರೇನ್ ಮತ್ತು ರೋಮೆನಿಯಾ ರಾಷ್ಟ್ರಗಳ ನಡುವೆ ಸಂಘರ್ಷ ನಡೆಯುತ್ತಿತ್ತು.

Articles You Might Like

Share This Article