ಬೆಂಗಳೂರು,ಜ.19- ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ವಿರುದ್ಧ ಕೋಟ್ಯಂತರ ರೂ.ಬೆಲೆ ಬಾಳುವ ಬಿಡಿಎ ನಿವೇಶನ ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಕೋಟ್ಯಂತರ ರೂ.ಬೆಲೆಬಾಳುವ 7 ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ವತಃ ಬಿಡಿಎ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಎಳ್ಳುಕುಂಟೆ ಗ್ರಾಮದ ಸರ್ವೆ ನಂ 11 ರಲ್ಲಿರುವ ಹೆಚ್ಎಸ್ಆರ್ ಲೇಔಟ್ನ 3ನೇ ಸೆಕ್ಟರ್ನಲ್ಲಿರುವ 6್ಡ080 ವಿಸ್ತೀರ್ಣದ 685,686,687,688,689,690,691 ನಂಬರಿನ ಬಿಡಿಎ ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.
ಉಮಾಪತಿ ಅವರು ಪ್ರಾಧಿಕಾರದ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಎಸಿ ಶೀಟ್ನ ಶೆಡ್ಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಬಿಡಿಎ ಕಾರ್ಯಪಾಲಕ ಅಭಿಯಂತರರು ಆಯುಕ್ತರಿಗೆ ಟಿಪ್ಪಣಿ ಮೂಲಕ ಮನವಿ ಮಾಡಿಕೊಂಡಿರುವ ಪ್ರತಿ ಈ ಸಂಜೆಗೆ ಲಭ್ಯವಾಗಿದೆ.
ರಾಜಧಾನಿ ಮಾಫಿಯಾ ಗ್ರಾಮಾಂತರಕ್ಕೆ ಶಿಫ್ಟ್ : ಹೆಡೆಮುರಿ ಕಟ್ಟುವರೇ ಅಲೋಕ್..?
ಬಿಡಿಎ ಅಧಿಕಾರಿಗಳು ಉಲ್ಲೇಖ ಮಾಡಿರುವ ಏಳು ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿರುವ ನಿರ್ಮಾಪಕ ಉಮಾಪತಿ ವಿರುದ್ಧ ಯುದ್ಧಭೂಮಿ ಹೋರಾಟ ಸೇನೆಯ ಅಧ್ಯಕ್ಷ ಹೇಮಂತ್ರಾಜ್ ಎಂಬುವರು ದೂರು ನೀಡಿದ್ದಾರೆ.
ಬಿಡಿಎ ಅಧಿಕಾರಿಗಳು ಆಯುಕ್ತರಿಗೆ ಬರೆದಿರುವ ಟಿಪ್ಪಣಿ ಪ್ರತಿ ಸೇರಿದಂತೆ ಹಲವಾರು ದಾಖಲೆಗಳ ಸಮೇತ ಲೋಕಾಯುಕ್ತ ಹಾಗೂ ಬಿಡಿಎ ಆಯುಕ್ತರಿಗೆ ಹೇಮಂತ್ರಾಜ್ ದೂರು ದಾಖಲಿಸಿದ್ದಾರೆ.
ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವತ್ತ ಭಾರತ ದಾಪುಗಾಲು
ಈ ಅಕ್ರಮದಲ್ಲಿ ಕೆಲ ಬಿಡಿಎ ಅಧಿಕಾರಿಗಳು ಉಮಾಪತಿ ಅವರಿಗೆ ಸಹಕಾರ ನೀಡಿರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ಕೋಟ್ಯಂತರ ರೂ.ಬೆಲೆಬಾಳುವ ನಿವೇಶನಗಳನ್ನು ವಶಪಡಿಸಿಕೊಳ್ಳುವುದರ ಜತೆಗೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
umapathy srinivas, BDA, land, Encroached, Begur,