ವಿವಾದಕ್ಕೀಡಾಯ್ತು ಭಾರತ ಗೆಲುವಿಗೆ ಕಾರಣವಾದ ನೋ ಬಾಲ್

Social Share

ನವದೆಹಲಿ, ಅ.24- ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವಿಗೆ ಕಾರಣವಾದ ಕೊನೆ ಓವರ್‍ನ ನೋ ಬಾಲ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ತಂತ್ರಜ್ಞಾನದ ಸವಲತ್ತು ಇದ್ದರೂ ಏಕಾಏಕಿ ನೋ ಬಾಲ್ ತೀರ್ಪ ನೀಡಿದ ಅಂಪೈರ್ ಅವರ ನಿರ್ಧಾರಕ್ಕೆ ಪಾಕಿಸ್ತಾನದ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊನೆ ಓವರ್‍ನಲ್ಲಿ ಭಾರತಕ್ಕೆ 16 ರನ್ ಬೇಕಿತ್ತು. ಮೊದಲ ಬಾಲ್‍ನಲ್ಲೇ ರ್ಹಾಕ್ ಪಾಂಡ್ಯ ಅವರ ವಿಕೇಟ್ ಬಿದ್ದಾಗ ಬಹುತೇಕ ಪಂದ್ಯ ಪಾಕಿಸ್ತಾನದ ಕಡೆ ವಾಲಿತ್ತು. ಇಂತಹ ಸಂದರ್ಭದಲ್ಲಿ ಅಂಪೈರ್ ತೀರ್ಪಿನಿಂದಾಗಿ ಪಂದ್ಯ ಭಾರತ ಗೆಲ್ಲಲು ಸಹಕಾರಿಯಾಯಿತು ಎಂದು ವಾಸಿಂ ಅಕ್ರಮ, ವಕಾರ್ ಯೂನಿಸ್ ಮತ್ತು ಶೋಯೆಬ್ ಮಲಿಕ್ ಮತ್ತಿತರರು ಆರೋಪಿಸಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದ ಜಾನ್ಸನ್‌, ರಿಷಿ ಬ್ರಿಟನ್‍ ಪ್ರಧಾನಿಯಾಗೋದು ಫಿಕ್ಸ್

ನೋ ಬಾಲ್ ಕೇಳಿದ ಕೋಹ್ಲಿ ಅವರದು ತಪ್ಪಲ್ಲ, ಆದರೆ, ಅಂಪೈರ್ ಆದವರು ಇರುವ ತಂತ್ರಜ್ಞಾನದ ಮೊರೆ ಹೋಗಿ ಮೂರನೇ ಅಂಪೈರ್ ನೆರವು ಪಡೆಯಬೇಕಿತ್ತು ಎನ್ನುವುದು ನಮ್ಮ ವಾದವಾಗಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್‍ಗೆ ವಿದೇಶಿ ಕೊಡುಗೆ ರದ್ದು

ನವಾಜ್ ಎಸೆದ ಎಸೆತ ಬರಿಗಣ್ಣಿನಲ್ಲಿ ನೋ ಬಾಲ್ ರೀತಿ ಕಂಡು ಬರಲಿಲ್ಲ. ಆದರೆ, ಸ್ಲೋ ಮೋಷನ್‍ನಲ್ಲಿ ಅದು ನೋ ಬಾಲ್‍ನಂತೆ ಕಾಣುತಿತ್ತು. ಇಂತಹ ಸಂದರ್ಭದಲ್ಲಿ ಕೋಹ್ಲಿ ಕೋರಿಕೆ ಮೇರೆಗೆ ನೋ ಬಾಲ್ ತೀರ್ಪು ನೀಡಿರುವುದು ಸೂಕ್ತವಾದ ಕ್ರಮವಲ್ಲ. ಈ ತಪ್ಪು ನಿರ್ಧಾರವೇ ಪಾಕ್ ಸೋಲಿಗೆ ಕಾರಣ ಎಂದು ವಾಸಿಮ್ ಆಕ್ರಂ ಅವರು ವಿಶ್ಲೇಷಿಸಿದ್ದಾರೆ.

Articles You Might Like

Share This Article