ಇಂಗ್ಲೆಂಡ್, ದ.ಆಫ್ರಿಕಾ ಸರಣಿಗೆ ಮಲ್ಲಿಕ್, ಸೇನ್ ಆಯ್ಕೆ..? ಸುಳಿವು ನೀಡಿದ ಸೌರವ್

Spread the love

ಮುಂಬೈ, ಮೇ 17- ಐಪಿಎಲ್ ಮುಗಿದ ನಂತರ ಭಾರತ ತಂಡವು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆಡುತ್ತಿದ್ದು ಯುವ ಆಟಗಾರರಾದ ಕುಲ್‍ದೀಪ್ ಸೇನ್ ಹಾಗೂ ಉಮ್ರಾನ್ ಮಲಿಕ್ ಅವರು ತಂಡದಲ್ಲಿ ಬಹುತೇಕ ಸ್ಥಾನ ಪಡೆಯುವುದು ಖಚಿತ ಎಂಬುದು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಮಾತಿನಿಂದ ಸ್ಪಷ್ಟವಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಐಪಿಎಲ್ ಸರಣಿಯಲ್ಲೂ ಕೆಲವು ಉದಯೋನ್ಮುಖ ಆಟಗಾರರು ಬೆಳಕಿಗೆ ಬರುತ್ತಾರೆ, ಈ ಬಾರಿಯು ಅಂತಹ ಸಾಕಷ್ಟು ಆಟಗಾರರು ಗಮನ ಸೆಳೆದಿದ್ದಾರೆ, ಆದರೆ ನನ್ನನ್ನು ಹೆಚ್ಚು ಕಾಡಿದ ಬೌಲರ್‍ಗಳೆಂದರೆ ಸನ್‍ರೈಸರ್ಸ್ ಹೈದ್ರಾಬಾದ್‍ನ ವೇಗಿ ಉಮ್ರಾನ್ ಮಲ್ಲಿಕ್ ಹಾಗೂ ರಾಜಸ್ಥಾನ್ ರಾಯಲ್ಸ್ ನ ಆಟಗಾರ ಕುಲ್‍ದೀಪ್ ಸೇನ್ ಎಂದು ಗಂಗೂಲಿ ತಿಳಿಸಿದ್ದಾರೆ.

ಈ ಇಬ್ಬರು ಆಟಗಾರರು ಮುಂಬೈ ಹಾಗೂ ಪುಣೆ ಪಿಚ್‍ಗಳಲ್ಲಿ 150 ಕಿಲೋಮೀಟರ್‍ಗೂ ಹೆಚ್ಚು ವೇಗವಾಗಿ ಬೌಲಿಂಗ್ ಮಾಡುವ ಸಾಮಥ್ರ್ಯವನ್ನು ಗಮನಿಸಿದರೆ ಈ ಇಬ್ಬರು ಆಟಗಾರರು ಆದಷ್ಟು ಬೇಗ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಸೌರವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತ ತಂಡದಲ್ಲಿ ಈಗಾಗಲೇ ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬೂಮ್ರಾ, ಟಿ.ನಟರಾಜನ್‍ರಂತಹ ವೇಗಿಗಳು ಇರುವುದರಿಂದ ಉಮ್ರಾನ್ ಹಾಗೂ ಕುಲ್‍ದೀಪ್ ಸೇನ್ ಅವರನ್ನು ಸರಿಯಾದ ಸಮಯದಲ್ಲೇ ಬಳಸಿಕೊಳ್ಳ ಬೇಕಾಗುತ್ತದೆ ಎಂದು ಗಂಗೂಲಿ ತಿಳಿಸಿದ್ದಾರೆ.

2022ರ ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್‍ನ ಮುಂಚೂಣಿ ಬೌಲರ್ ಎನಿಸಿಕೊಂಡಿರುವ ಉಮ್ರಾನ್ ಮಲ್ಲಿಕ್ ಒಂದು ಪಂದ್ಯದಲ್ಲಿ 5 ವಿಕೆಟ್ ಕಬಳಿಸಿರುವುದಲ್ಲದೇ 18 ಕಬಳಿಸುವ ಮೂಲಕ ಅನ್‍ಕ್ಯಾಪ್ಡ್ ಬೌಲರ್‍ಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Facebook Comments