ನ್ಯೂಯಾರ್ಕ್,ಡಿ.20- ಜಾಗತೀಕವಾಗಿ ದುಷ್ಪರಿಣಾಮ ಬೀರುತ್ತಿರುವ ರಷ್ಯಾ-ಉಕ್ರೇನ್ ದೇಶಗಳ ನಡುವಿನ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಯೊ ಗುಟೆರಸ್ ಅವರು 2023 ರ ಅಂತ್ಯದ ವೇಳೆಗೆ ಯುದ್ಧ ಮುಗಿಯುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
ರಷ್ಯಾದ ಯುದ್ದೋತ್ಸಾಹ ನೋಡಿದರೆ ಅದು ಸಧ್ಯಕ್ಕೆ ಯುದ್ದ ನಿಲ್ಲಿಸುವ ಲಕ್ಷಣಗಳನ್ನು ತೋರುತ್ತಿಲ್ಲ. ತಕ್ಷಣಕ್ಕೆ ನಡೆಸುವ ಶಾಂತಿ ಮಾತುಕತೆಗಳಿಂದ ಯುದ್ಧ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಹತ್ತು ತಿಂಗಳು ಕಳೆದಿದೆ. ಆದರೂ ಯುದ್ದ ನಿಲ್ಲುವ ಸೂಚನೆ ಕಾಣುತ್ತಿಲ್ಲ. ನಿನ್ನೆಯಿಂದ ರಷ್ಯಾ ಇದ್ದಕ್ಕಿದ್ದಂತೆ ಕೀವ್ ನಗರದ ಮೇಲೆ ಡ್ರೋನ್ ದಾಳಿ ತೀವ್ರಗೊಳಿಸಿರುವುದನ್ನು ನೋಡಿದರೆ ರಷ್ಯಾದ ಯುದ್ಧದ ಹಸಿವು ತಣಿದಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ
ರಷ್ಯಾ-ಉಕ್ರೇನ್ ದೇಶಗಳ ನಡುವಿನ ಮಿಲಿಟರಿ ಮುಖಾಮುಖಿ ಇದೇ ರೀತಿ ಮುಂದುವರೆಯುತ್ತದೆ. ಉಭಯ ರಾಷ್ಟ್ರಗಳ ನಡುವೆ ಮತ್ತೆ ಶಾಂತಿ ಮಾತುಕತೆ ನಡೆಸಬೇಕಿದೆ ಆದರೆ, ಸಧ್ಯಕ್ಕೆ ಅದು ಸಾಧ್ಯವಿಲ್ಲ ಎಂದು ನನಗನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಯುದ್ಧ ಶುರುವಾದ ಆರಂಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸಂಪೂರ್ಣ ಮಾತುಕತೆ ನಡೆಯಬೇಕಾದರೆ ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಉಕ್ರೇನ್ ಪಟ್ಟು ಹಿಡಿದಿದ್ದರೆ, ರಷ್ಯಾ ಅದು ಯಾವುದೆ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹಠ ಸಾದಿಸುತ್ತಿರುವುದರಿಂದ ಯುದ್ಧದ ಭೀತಿ ಮುಂದುವರೆಯುತ್ತಲೆ ಇದೆ.
#UNchief, #RussiaUkraineWar, #AntonioGuterres,